ಕರ್ನಾಟಕ

karnataka

ETV Bharat / city

ಭೂಗತ ಪಾತಕಿ ರವಿ ಪೂಜಾರಿ ಶೀಘ್ರ ಭಾರತಕ್ಕೆ ಹಸ್ತಾಂತರ! - ರವಿ ಪೂಜಾರಿ ಬಂಧನ

ಡಾನ್‌ ರವಿ ಪೂಜಾರಿಯನ್ನು ದಕ್ಷಿಣ ಆಫ್ರಿಕಾದ ಸೆನೆಗಲ್​ನಲ್ಲಿ ಅಲ್ಲಿನ ಸರ್ಕಾರ ವಶಕ್ಕೆ ಪಡೆದಿದೆ. ಇನ್ನೂ ನಾಲ್ಕೈದು ದಿನಗಳಲ್ಲಿ ರವಿ ಪೂಜಾರಿಯನ್ನ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ.

ravi-pujari-swiftly-handed-over-to-india-police
ರವಿ ಪೂಜಾರಿ

By

Published : Feb 23, 2020, 1:41 PM IST

Updated : Feb 25, 2020, 3:24 PM IST

ಬೆಂಗಳೂರು :ಭೂಗತ ಪಾತಕಿ ರವಿ ಪೂಜಾರಿಯನ್ನು ‌ನಾಲ್ಕೈದು ದಿನಗಳಲ್ಲಿ ದಕ್ಷಿಣ ಆಫ್ರಿಕಾ ಸರ್ಕಾರ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. ಮೊದಲು ಮುಂಬೈ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲಿದ್ದಾರೆ. ಬಳಿಕ ರಾಜ್ಯ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ಸರ್ಕಾರ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್​ನಲ್ಲಿ ವಶಕ್ಕೆ ಪಡೆದಿತ್ತು. ರವಿ ಪೂಜಾರಿ ಬಂಧನ ತಿಳಿಯುತ್ತಿದ್ದ ಹಾಗೆ ಆರೋಪಿಯನ್ನು ವಶಕ್ಕೆ ಪಡೆಯಲು ರಾಜ್ಯ ಪೊಲೀಸರು ಪ್ರಯತ್ನಿಸಿದ್ದರು. ಆದರೆ, ಕಾನೂನು ತೊಡಕುಗಳಿಂದ ಹಸ್ತಾಂತರ ವಿಳಂಬವಾಗಿತ್ತು. ಈಗ ಕಾನೂನು ತೊಡಕು ನಿವಾರಣೆಯಾಗಿದ್ದು, ನಾಲ್ಕೈದು ದಿನಗಳಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದ್ದಾನೆ.

90ರ ದಶಕದಲ್ಲಿ ಭೂಗತ ಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ. ‌ದುಬೈನಲ್ಲೇ ಕೂತು ಮುಂಬೈ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನ ನಡೆಸುತ್ತಿದ್ದ.‌ ಬೆಂಗಳೂರಿನಲ್ಲಿ 26, ಮಂಗಳೂರಿನಲ್ಲಿ 29 ಸೇರಿ ಹಲವು ಠಾಣೆಗಳಲ್ಲಿ ರವಿ ಪೂಜಾರಿ ವಿರುದ್ಧ ಕೇಸ್​ಗಳು ದಾಖಲಾಗಿವೆ.

ಸದ್ಯ ರವಿ ಪೂಜಾರಿ ಹಸ್ತಾಂತರಗೊಂಡ ನಂತರ ರಾಜ್ಯ ಪೊಲೀಸ್​ ಇಲಾಖೆಯಿಂದ ತನಿಖೆ ನಡೆಯಲಿದೆ. ರಾಜ್ಯದಲ್ಲಿರುವ ಎಲ್ಲ ಕೇಸ್​​ಗಳ ಮಾಹಿತಿಯನ್ನೂ ಪೊಲೀಸರು ಕಲೆ‌ಹಾಕ್ತಿದ್ದಾರೆ.

Last Updated : Feb 25, 2020, 3:24 PM IST

ABOUT THE AUTHOR

...view details