ಕರ್ನಾಟಕ

karnataka

ETV Bharat / city

'ನನಗೆ ಜೀವ ಭಯ ಇದೆ, ಮುಂಬೈಗೆ ಕಳುಹಿಸಬೇಡಿ'.. ಹೈಕೋರ್ಟ್​ಗೆ ಡಾನ್ ರವಿ ಪೂಜಾರಿ ಮೇಲ್ಮನವಿ

ಹದಿಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಶಬ್ನಮ್ ಡೆವಲಪರ್ಸ್ ಉದ್ಯೋಗಿಗಳಾದ ರವಿ ಹಾಗೂ ಶೈಲಜಾ ಎಂಬುವರ ಜೋಡಿ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ..

Ravi poojary
ರವಿ ಪೂಜಾರಿ

By

Published : Nov 18, 2020, 8:14 PM IST

ಬೆಂಗಳೂರು: ತನಗೆ ವಿಪರೀತ ಶತ್ರುಗಳಿದ್ದು ಜೀವ ಭಯವಿದೆ. ಹೀಗಾಗಿ ತನ್ನನ್ನು ಮುಂಬೈ ಪೊಲೀಸರ ವಶಕ್ಕೆ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಭೂಗತ ಪಾತಕಿ ರವಿ ಪೂಜಾರಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾನೆ.

ಅಪರಾಧ ಪ್ರಕರಣವೊಂದರಲ್ಲಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಅಗತ್ಯವಿದ್ದು, ರವಿ ಪೂಜಾರಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ ಮುಂಬೈ ಪೊಲೀಸರು ನಗರದ 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪಾತಕಿ ರವಿ ಪೂಜಾರಿಯನ್ನು ಮುಂಂಬೈ ಪೊಲೀಸರ ವಶಕ್ಕೆ ನೀಡಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರವಿ ಪೂಜಾರಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾನೆ. ತನಗೆ ಮುಂಬೈನಲ್ಲಿ ಸಾಕಷ್ಟು ವಿರೋಧಿಗಳಿದ್ದಾರೆ.

ಅವರಿಂದ ತನ್ನ ಜೀವಕ್ಕೆ ಅಪಾಯವಿದೆ. ಹೀಗಾಗಿ ತನ್ನನ್ನ ಮುಂಬೈ ಪೊಲೀಸರ ವಶಕ್ಕೆ ನೀಡಿರುವ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಮಾಡಬೇಕು ಎಂದು ಅರ್ಜಿ ಸಲ್ಲಿಸಿದ್ದಾನೆ. ಇಂಟರ್ ಪೋಲ್ ಅಧಿಕಾರಿಗಳು ತನ್ನನ್ನು ಕರ್ನಾಟಕದ ಪ್ರಕರಣಕ್ಕಾಗಿ ಮಾತ್ರವೇ ಹಸ್ತಾಂತರ ಮಾಡಿದ್ದಾರೆ.

ಆದರೆ, ಮುಂಬೈ ಪೊಲೀಸರು ಬೇರೆ ಪ್ರಕರಣದಲ್ಲಿ ತಮ್ಮ ಕಸ್ಟಡಿ ಕೋರಿ ಅರ್ಜಿ ಸಲ್ಲಿಸಿದ್ದಾರೆ, ವಿಡಿಯೋ ಕಾನ್ಫರೆನ್ಸ್ ಮೂಲಕವೂ ನನ್ನನ್ನು ವಿಚಾರಣೆ ನಡೆಸಲು ಅವಕಾಶವಿದೆ. ಆದರೂ ಸಹ ಮುಂಬೈ ಪೊಲೀಸರ ವಶಕ್ಕೆ ತಮ್ಮನ್ನು ಒಪ್ಪಿಸುವ ಕುರಿತು ಬೆಂಗಳೂರಿನ ಕೋರ್ಟ್ ರಿಮ್ಯಾಂಡ್ ನೀಡಿರುವ ಆದೇಶ ಸೂಕ್ತವಲ್ಲ ಎಂದು ಪೂಜಾರಿ ಆರೋಪಿಸಿದ್ದಾನೆ.

ಹದಿಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಶಬ್ನಮ್ ಡೆವಲಪರ್ಸ್ ಉದ್ಯೋಗಿಗಳಾದ ರವಿ ಹಾಗೂ ಶೈಲಜಾ ಎಂಬುವರ ಜೋಡಿ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ.

26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪೂಜಾರಿಯನ್ನು ವಿದೇಶದಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿದೆ. ಆತನ ವಿರುದ್ಧ ಸುಮಾರು 108 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ.

ABOUT THE AUTHOR

...view details