ಕರ್ನಾಟಕ

karnataka

ETV Bharat / city

Ravi Poojari: ಮುಂಬೈ, ಕೇರಳ ಪೊಲೀಸರ ಬಳಿಕ ಗುಜರಾತ್ ಪೊಲೀಸ್ ವಶಕ್ಕೆ

ಜನವರಿ 2017ರಲ್ಲಿ ಗುಜರಾತ್‌ನ ಬೊರ್ಸಾದ್​​ನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಕೌನ್ಸಿಲರ್ ಪ್ರಗ್ನೇಶ್ ಪಟೇಲ್ ಮೇಲೆ ಗುಂಡಿನ ದಾಳಿಯನ್ನು ನಡೆಸಲಾಗಿದ್ದು, ಈ ಪ್ರಕರಣದಲ್ಲಿ ರವಿ ಪೂಜಾರಿ ವಿಚಾರಣೆ ನಡೆಯಲಿದೆ.

ravi-poojari-now-gujrat-ats-custody
ಮುಂಬೈ, ಕೇರಳ ಪೊಲೀಸರ ಬಳಿಕ ರವಿ ಪೂಜಾರಿ ಗುಜರಾತ್ ಪೊಲೀಸ್ ವಶಕ್ಕೆ

By

Published : Jun 30, 2021, 3:38 AM IST

Updated : Jun 30, 2021, 4:56 AM IST

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಬಂಧನ ಪ್ರಕರಣದಲ್ಲಿ ಮುಂಬೈ, ಕೇರಳ ಬಳಿಕ ಗುಜರಾತ್ ಪೊಲೀಸರ ವಶಕ್ಕೆ ನೀಡಲಾಗಿದೆ. 30 ದಿನಗಳ ಕಾಲ ಗುಜರಾತ್ ಎಟಿಎಸ್ ವಶಕ್ಕೆ ನೀಡಿ ಬೆಂಗಳೂರಿನ 62ನೇ ಸಿಸಿಎಚ್ ಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ.

ಜನವರಿ 2017ರಲ್ಲಿ ಗುಜರಾತ್‌ನ ಬೊರ್ಸಾದ್​​ನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಕೌನ್ಸಿಲರ್ ಪ್ರಗ್ನೇಶ್ ಪಟೇಲ್ ಮೇಲೆ ಗುಂಡಿನ ದಾಳಿಯನ್ನು ನಡೆಸಲಾಗಿದ್ದು, ಈ ಪ್ರಕರಣದಲ್ಲಿ ರವಿ ಪೂಜಾರಿ ವಿಚಾರಣೆ ನಡೆಯಲಿದೆ.

ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದ ಗುಜರಾತ್ ಎಟಿಎಸ್ ತನಿಖೆಯ ವೇಳೆ ರವಿ ಪೂಜಾರಿಯ ಪಾತ್ರ ಬೆಳಕಿಗೆ ಬಂದಿತ್ತು. ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ಗುಜರಾತ್ ಎಟಿಎಸ್ ಮನವಿ ಸಲ್ಲಿಸಿತ್ತು. 30 ದಿನಗಳ ಕಾಲ ಗುಜರಾತ್ ಎಟಿಎಸ್ ವಶಕ್ಕೆ ನೀಡಿ ಬೆಂಗಳೂರಿನ 62ನೇ ಸಿಸಿಎಚ್ ಮಂಗಳವಾರ ಆದೇಶ ಹೊರಡಿಸಿದೆ.

ಕೇರಳ ಕೇಸ್: ಜೈಲಿನಲ್ಲೇ ವಿಚಾರಣೆ ನಡೆಸಲು ಸಮ್ಮತಿ ನೀಡಿದ್ದ ಕೋರ್ಟ್

ಕೇರಳದ ಬ್ಯೂಟಿ ಪಾರ್ಲರ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ವಶಕ್ಕೆ ಪಡೆದು ವಿಚಾರಣೆ ನಡೆಸಲು ಕೇರಳದ ಎರ್ನಾಕುಲಂ ಪೊಲೀಸರಿಗೆ ಫೆಬ್ರವರಿ 18ರಂದು ಕೋರ್ಟ್ ಅನುಮತಿ ನೀಡಿತ್ತು.

ರವಿ ಪೂಜಾರಿಯನ್ನು ವಶಕ್ಕೆ ಪಡೆಯಲು ಅನುಮತಿ ನೀಡುವಂತೆ ಕೋರಿ ಕೇರಳದ ಎರ್ನಾಕುಲಂ ಸಿಸಿಬಿ ವಿಭಾಗದ ಇನ್ಸ್‌ಪೆಕ್ಟರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 65ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಈ ಆದೇಶ ಮಾಡಿತ್ತು.

ಎರ್ನಾಕುಲಂ ಸಿಸಿಬಿ ಪೊಲೀಸರು ಆರೋಪಿ ಪೂಜಾರಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ಐದು ದಿನಗಳ ಕಾಲ ಔಪಚಾರಿಕವಾಗಿ ಬಂಧಿಸಿ ವಿಚಾರಣೆ ನಡೆಸಬಹುದು ಎಂದಿತ್ತು.

ಆದರೆ ಈ ಸಂದರ್ಭದಲ್ಲಿ ಆರೋಪಿ ಪರ ವಕೀಲರು ಹಾಗೂ ಕಾರಾಗೃಹದ ಮುಖ್ಯ ಅಧೀಕ್ಷಕರು ಹಾಜರಿರಬೇಕು. ಈ ಸಂಬಂಧ ತನಿಖಾಧಿಕಾರಿ ವರದಿ ಸಿದ್ಧಪಡಿಸಿ ಎರ್ನಾಕುಲಂನ ಸಂಬಂಧಿತ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಈ ಬಗ್ಗೆ ಆರೋಪಿ ಪರ ವಕೀಲರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.

ನವೆಂಬರ್ 17 ರಂದು ಮುಂಬೈ ಪೊಲೀಸರ ವಶಕ್ಕೆ

ಭೂಗತ ಪಾತಕಿ ರವಿ ಪೂಜಾರಿಯನ್ನು ನಗರದ 62ನೇ ಎಸಿಎಂಎಂ ಕೋರ್ಟ್ 10 ದಿನಗಳ ಕಾಲ ಮುಂಬೈ ಪೊಲೀಸರ ವಶಕ್ಕೆ ನೀಡಿ ಕಳೆದ ವರ್ಷ ನವೆಂಬರ್ 17ರಂದು ಆದೇಶಿಸಿತ್ತು.

ಬಿಲ್ಡರ್ ರಾಜು ಪಾಟೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಎದುರು ಹಾಜರುಪಡಿಸಲು ಮುಂಬೈ ಪೊಲೀಸರು ರವಿ ಪೂಜಾರಿಯನ್ನು ವಶಕ್ಕೆ ನೀಡುವಂತೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್ ಮಾಣಿಕ್ಯ ಅವರು ಆರೋಪಿಯನ್ನು 10 ದಿನಗಳ ಕಾಲ ಮುಂಬೈ ಪೊಲೀಸರ ವಶಕ್ಕೆ ನೀಡಿ ಆದೇಶಿಸಿತ್ತು.

ವಿಚಾರಣೆ ಸಂದರ್ಭದಲ್ಲಿ ಆರೋಪಿ ಪರ ವಕೀಲರು ವಾದಿಸಿ, ರವಿ ಪೂಜಾರಿಯನ್ನು ಈ ಸಂದರ್ಭದಲ್ಲಿ ಮುಂಬೈ ಪೊಲೀಸರ ವಶಕ್ಕೆ ನೀಡುವುದು ಸೂಕ್ತವಲ್ಲ. ಮುಂಬೈನಲ್ಲಿ ಕೊರೊನಾ ಹೆಚ್ಚಿಗಿದೆ. ಅಲ್ಲದೇ ರವಿ ಪ್ರಾಣಕ್ಕೆ ಬೆದರಿಕೆ ಇದೆ. ಹೀಗಾಗಿ ವಶಕ್ಕೆ ನೀಡಬಾರದು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ : ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ

ಈ ಹಿನ್ನೆಲೆಯಲ್ಲಿ ಪೂಜಾರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಹಾಗೂ ಕೊರೊನಾ ಸೋಂಕು ತಾಕದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಬಿಲ್ಡರ್ ರಾಜು ಪಾಟೀಲ್ ಹತ್ಯೆಗೆ ಸಂಬಂಧಿಸಿದಂತೆ 2015ರಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧ ಕೃತ್ಯ ನಿಯಂತ್ರಣ (ಎಂಸಿಒಸಿಎ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ರವಿ ಪೂಜಾರಿಯನ್ನು ಮುಂಬೈ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲು ಅಗತ್ಯವಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಬೆಂಗಳೂರಿನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Last Updated : Jun 30, 2021, 4:56 AM IST

ABOUT THE AUTHOR

...view details