ಕರ್ನಾಟಕ

karnataka

ETV Bharat / city

ಕೊರೊನಾ ಚಿಕಿತ್ಸೆಗೆ ರಾಜ್ಯ ಸರ್ಕಾರದಿಂದ ರೇಟ್​ ಫಿಕ್ಸ್​​​ : ಇಲ್ಲಿದೆ ಪ್ರತಿ ದಿನದ ದರಗಳ ಪಟ್ಟಿ - ಕರ್ನಾಟಕದಲ್ಲಿ ಕೊರೊನಾಗೆ ಚಿಕಿತ್ಸೆ

ಕೊರೊನಾ ಚಿಕಿತ್ಸೆಗೆ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳು ವಿಧಿಸಬೇಕಾದ ಶುಲ್ಕವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದ್ದು, ಪ್ರತಿ ದಿನದ ಶುಲ್ಕದ ವಿವರಗಳು ಇಲ್ಲಿದೆ.

karnataka government
ರಾಜ್ಯ ಸರ್ಕಾರ

By

Published : Jun 23, 2020, 2:14 PM IST

Updated : Jun 23, 2020, 4:42 PM IST

ಬೆಂಗಳೂರು:ಕೋವಿಡ್-19 ಚಿಕಿತ್ಸೆಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಮೊದಲನೇ ಪ್ಯಾಕೇಜ್ ವಿಮಾ ವ್ಯಾಪ್ತಿಗೆ ಒಳಪಟ್ಟಿದ್ದು, ಎರಡನೇ ಪ್ಯಾಕೇಜ್ ವಿಮಾ ವ್ಯಾಪ್ತಿಯಿಂದ ಹೊರಗಿನದ್ದಾಗಿದೆ.

ಸಾರ್ವಜನಿಕ ಆರೋಗ್ಯ ಇಲಾಖೆಯ ಶಿಫಾರಸು ಪಡೆದ ರೋಗಿಗಳಿಗೆ (ಪ್ರತಿ ದಿನದ ದರ) ಜನರಲ್ ವಾರ್ಡ್​ಗೆ 5,200 ರೂಪಾಯಿ, ಹೆಚ್​ಡಿಯುಗೆ 7000 ರೂಪಾಯಿ, ವೆಂಟಿಲೇಟರ್​ ಇಲ್ಲದ ಐಸೋಲೇಷನ್​ಗೆ 8500 ರೂಪಾಯಿ, ವೆಂಟಿಲೇಟರ್ ಇರುವ ಐಸೋಲೇಷನ್​ ಐಸಿಯುಗೆ 10 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ.

ಕೊರೊನಾ ಚಿಕಿತ್ಸೆಗೆ ಶುಲ್ಕ

ಆರೋಗ್ಯ ಇಲಾಖೆ ಶಿಫಾರಸು ಇಲ್ಲದೇ ಆಸ್ಪತ್ರೆಗೆ ತೆರಳಿದವರಿಗೆ ಜನರಲ್ ವಾರ್ಡ್​ನಲ್ಲಿ 10 ಸಾವಿರ ರೂಪಾಯಿ, ಹೆಚ್​ಡಿಯುಗೆ 12 ಸಾವಿರ ರೂಪಾಯಿ, ವೆಂಟಿಲೇಟರ್​ ಇಲ್ಲದ ಐಸೋಲೇಷನ್ ಐಸಿಯುಗೆ 15 ಸಾವಿರ ರೂಪಾಯಿ, ವೆಂಟಿಲೇಟರ್​ ಇರುವ ಐಸೊಲೇಷನ್ ಐಸಿಯುಗೆ 25 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ.

ಕೊರೊನಾ ಚಿಕಿತ್ಸೆಗೆ ಶುಲ್ಕ

ಸರ್ಕಾರದ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ. ಆಸ್ಪತ್ರೆಗಳ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು. ಆರೋಗ್ಯ ವಿಮೆ ಇರುವವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪ್ಯಾನೆಲ್​​ನಲ್ಲಿ ಸೇರಿರುವ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ.
ಬಿಪಿಎಲ್ ಮತ್ತು ಎಪಿಎಲ್ ಹಾಗೂ ವಲಸಿಗ ಕಾರ್ಮಿಕರು ಪಿಡಿಎಸ್ ಕಾರ್ಡ್ ಇದ್ದರೂ ಚಿಕಿತ್ಸೆ ಕೊಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

Last Updated : Jun 23, 2020, 4:42 PM IST

ABOUT THE AUTHOR

...view details