ಬೆಂಗಳೂರು:ಡ್ರಾಪ್ ಕೊಡುವ ನೆಪದಲ್ಲಿ ಅಪ್ತಾಪ್ತೆಯನ್ನ ಮನೆಗೆ ಕರೆದುಕೊಂಡು ಹೋಗಿ ಆತ್ಯಾಚಾರ ಎಸಗಿರುವುದಾಗಿ ಆರೋಪದಡಿ ಗೋವಿಂದರಾಜನಗರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ನನ್ನು ಬಂಧಿಸಲಾಗಿದೆ. ಪವನ್ ದ್ಯಾವಣ್ಣನವರ್ ಬಂದಿತ ಕಾನ್ಸ್ಟೇಬಲ್. ಇದೇ ತಿಂಗಳು 27ರಂದು ಘಟನೆ ನಡೆದಿದೆ.
ಅಪ್ರಾಪ್ತೆಯು ಚಾಮರಾಜನಗರ ಮೂಲದ ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಹೀಗಾಗಿ ಮನೆ ತೊರೆದು ಬಂದಿದ್ದ ಸಂತ್ರಸ್ತೆ ಜುಲೈ 27ರಂದು ಪಾರ್ಕ್ ಬದಿ ಓಡಾಡುತ್ತಿದ್ದಳು. ಆಗ ಕರ್ತವ್ಯದಲ್ಲಿದ್ದ ಪವನ್, ಅಪ್ರಾಪ್ತೆಯನ್ನು ಪ್ರಶ್ನಿಸಿದಾಗ ಆಕೆ ಚಾಮರಾಜನಗರಕ್ಕೆ ಹೋಗಬೇಕೆಂದು ಹೇಳಿದ್ದರು. ಬಳಿಕ ಡ್ರಾಪ್ ಕೊಡುವುದಾಗಿ ನಂಬಿಸಿ ಮನೆಗೆ ಕರೆದೊಯ್ದು ಕಾನ್ಸ್ಟೇಬಲ್ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ. ಸದ್ಯ ಆರೋಪಿ ಕಾನ್ಸ್ಟೇಬಲ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.