ಬೆಂಗಳೂರು: ಹೊಟ್ಟೆ ನೋವಿನಿಂದ ಬಳಲುತ್ತಿದ್ದ 16 ವರ್ಷದ ಅಪ್ರಾಪ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಪರಿಚಿತ ವ್ಯಕ್ತಿಯೇ ನಿರಂತರ ಅತ್ಯಾಚಾರವೆಸಗಿರುವ ಆತಂಕಕಾರಿ ಘಟನೆ ಬಯಲಾಗಿದೆ.
ಪರಿಚಿತನಿಂದಲೇ ಅತ್ಯಾಚಾರ: ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ - ಬೆಂಗಳೂರು
ಬೆಂಗಳೂರಿನಲ್ಲಿ ನೆಲೆಸಿದ್ದ ನೇಪಾಳ ಮೂಲದ ಬಾಲಕಿ ಮೇಲೆ ಆಕೆಯ ಪರಿಚಯಸ್ಥನೇ ಅತ್ಯಾಚಾರ ಎಸಗಿದ್ದು, ಇದೀಗ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ನೇಪಾಳ ಮೂಲದವಳಾದ ಸಂತ್ರಸ್ತ ಬಾಲಕಿ, ಆಕೆಯ ಸಹೋದರ ಹಾಗೂ ದೊಡ್ಡಪ್ಪ ನಗರದ ಹೆಚ್.ಎಸ್.ಆರ್ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದರು. ಪೋಷಕರಿಲ್ಲದ ಬಾಲಕಿ ಸಹೋದರ ಹಾಗೂ ದೊಡ್ಡಪ್ಪನ ಜೊತೆಯಲ್ಲೇ ವಾಸವಿದ್ದಳು. ಇದೇ ಕುಟುಂಬಕ್ಕೆ ನೇಪಾಳ ಮೂಲದ ಗೌತಮ್ ಅಪ್ತನಾಗಿದ್ದ. ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಗೌತಮ್ ಮನೆಯಲ್ಲಿ ಯಾರೂ ಇರದಿದ್ದಾಗ ಅನೇಕ ಬಾರಿ ಅತ್ಯಾಚಾರಗೈದಿರುವುದಾಗಿ ಬಾಲಕಿ ಬಾಯ್ಬಿಟ್ಟಿದ್ದಾಳೆ.
ಬಾಲಕಿಯನ್ನ ಬಾಲಮಂದಿರಕ್ಕೆ ಕಳಿಸಲಾಗಿದ್ದು, ಆಕೆಯ ಸಹೋದರ ನೀಡಿರುವ ದೂರಿನಡಿ ಹೆಚ್.ಎಸ್.ಆರ್ ಲೇಔಟ್ ಠಾಣಾ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ, ಆರೋಪಿ ಗೌತಮ್ನನ್ನ ಬಂಧಿಸಿದ್ದಾರೆ.