ಬೆಂಗಳೂರು: ಬ್ಯಾಂಕ್ ಲೋನ್ ರಿಕವರಿ ಮಾಡಲು ತೆರಳಿದ್ದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಸಂಗೀತಾ ಗೋಪಾಲ್ ವಿರುದ್ದ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಲ ವಾಪಸ್ ಕೇಳಿದ್ರೆ ರೇಪ್ ಕೇಸ್ ಹಾಕುವುದಾಗಿ ಬ್ಯಾಂಕ್ ಅಧಿಕಾರಿಗಳಿಗೆ ಬೆದರಿಕೆ: ಮಹಿಳೆ ವಿರುದ್ಧ ಪ್ರಕರಣ ದಾಖಲು - ಸಾಲ ವಸೂಲಿ ಮಾಡಲು ಬಂದ ಬ್ಯಾಂಕ್ ಅಧಿಕಾರಿಗಳಿಗೆ ಅತ್ಯಾಚಾರ ಪ್ರಕರಣ ಬೆದರಿಕೆ
ಬ್ಯಾಂಕ್ನಿಂದ ಸಾಲ ಪಡೆದಿದ್ದ ಹಣವನ್ನು ರಿಕವರಿ ಮಾಡಲು ಬಂದ ಬ್ಯಾಂಕ್ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ಧಗಳಿಂದ ನಿಂದಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಮಹಿಳೆಯೊಬ್ಬರು ಹೆದರಿಸಿದ ಘಟನೆ ಬೆಂಗಳೂರಿನಲ್ಲಿ ಜರುಗಿದೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಪ್ರಕರಣ ಬೆದರಿಕೆ
ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಆರ್ಯ, ಸಂಗೀತಾ ವಿರುದ್ದ ದೂರು ನೀಡಿದ್ದು, ಮಹಿಳೆಯಾಗಿ ಈ ರೀತಿ ದರ್ಪ ತೋರಿರೋದು ಸರಿಯಲ್ಲ. ಮಹಿಳಾ ಹಕ್ಕು, ಕಾನೂನಿನ ದುರ್ಬಳಕೆ ಮಾಡಿಕೊಂಡಿದ್ದಾರೆ. ಸೂಕ್ತ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಸಿಸಿಬಿಯಿಂದ ಬಂಧಿತನಾಗಿರುವ ಡ್ರಗ್ ಪೆಡ್ಲರ್ ರಾಹುಲ್ಗೆ ಸಂಗೀತಾ ಆಪ್ತೆಯಾಗಿದ್ದಾರೆ. ಈಕೆ ಬ್ಯಾಂಕ್ ನಿಂದ ಲೋನ್ ಪಡೆದು ಮರಳಿ ಹಣ ಕಟ್ಟಿರಲಿಲ್ಲ. ಹೀಗಾಗಿ ಬ್ಯಾಂಕ್ ಅಧಿಕಾರಿಗಳು ರಿಕವರಿಗಾಗಿ ಹೋದಾಗ ಬೆದರಿಕೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.