ಕರ್ನಾಟಕ

karnataka

By

Published : Nov 18, 2019, 11:07 AM IST

ETV Bharat / city

ಬೆಂಗಳೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: ಸೆಕ್ಯೂರಿಟಿ ಗಾರ್ಡ್​ ಅಂದರ್​

ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 35 ವರ್ಷದ ಒಂಟಿ ಮಹಿಳೆ ಮೇಲೆ 21 ವರ್ಷದ ಯುವಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೆಕ್ಯೂರಿಟಿ ಗಾರ್ಡ್​ ಅಂದರ್​

ಬೆಂಗಳೂರು: ಒಂಟಿ ಮಹಿಳೆ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬಾಗಲೂರು ಬಳಿ‌ ಇರುವ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.

ಪತಿಯಿಂದ ವಿಚ್ಚೇದನ ಪಡೆದ ಮಹಿಳೆ ಅಪಾರ್ಟ್‌ಮೆಂಟ್​ನಲ್ಲಿ ಒಂಟಿಯಾಗಿ ವಾಸವಿದ್ದರು‌. ಇದೇ ಅಪಾರ್ಟ್‌ಮೆಂಟ್​ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 21 ವರ್ಷದ ಸುಮನ್ ದೇವ್ ಕೃತ್ಯವೆಸಗಿದ ವ್ಯಕ್ತಿ. ಈತ ತಡರಾತ್ರಿ ಮಂಕಿಕ್ಯಾಪ್​ ಧರಿಸಿ ಮಹಿಳೆಯ‌ ಮನೆಗೆ ನುಗ್ಗಿ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಕೊಠಡಿಯಿಂದ ಹೊರಬಂದು ರಕ್ಷಣೆಗಾಗಿ ಕೂಗಾಡಿದ್ದಾರೆ. ಆಗ ಆರೋಪಿ ಕಿಟಕಿಯಿಂದ ಹಾರಿ ಪರಾರಿಯಾಗಿದ್ದಾನೆ.

ಈ ಸಂಬಂಧ ಬಾಗಲೂರ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇರೆಗೆ ಪೊಲೀಸರು ಸಿಸಿಟಿವಿ ದೃಶ್ಯ ಆಧಾರಿಸಿ ಸೆಕ್ಯುರಿಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪತಿ, ಸಂಬಂಧಿಕರಿಂದ ದೂರವಾದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೃತ್ಯ ನಡೆಸುತ್ತಿದುದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ABOUT THE AUTHOR

...view details