ಕರ್ನಾಟಕ

karnataka

ETV Bharat / city

ಯುವತಿ ಹೇಳಿಕೆ ಬೆನ್ನಲ್ಲೆ ಅಲರ್ಟ್ ಆದ ಜಾರಕಿಹೊಳಿ ಸಹೋದರರು: ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಗೆ ಸಿದ್ಧತೆ - ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ

ಸಂತ್ರಸ್ತ ಯುವತಿ ಹೇಳಿಕೆ ದಾಖಲಾದ ಬೆನ್ನಲ್ಲೆ ಕೋರ್ಟ್ ಮೊರೆ ಹೋಗಲು ರಮೇಶ್ ಜಾರಕಿಹೊಳಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಇಂದು ಅಥವಾ ನಾಳೆ ವಕೀಲರ ಮೂಲಕ ಸಿಆರ್‌ಪಿಸಿ 438 ಅಡಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

Ramesh Zarakiholi CD case
ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆಗೆ ರಮೇಶ್ ಜಾರಕಿಹೊಳಿ ಸಿದ್ದತೆ

By

Published : Mar 31, 2021, 11:51 AM IST

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಹೇಳಿಕೆ ದಾಖಲಾದ ಬೆನ್ನಲ್ಲೆ ಅಲರ್ಟ್ ಆದ ಜಾರಕಿಹೊಳಿ ಸಹೋದರು, ಸಂಕಷ್ಟದಿಂದ ಪಾರಾಗಲು ಕೋರ್ಟ್ ಮೊರೆ ಹೋಗಲು ಸಿದ್ಧವಾಗಿದ್ದಾರೆ ಎಂಬ ಮಾಹಿತಿ ಪ್ರಾಥಮಿಕ ಮೂಲಗಳಿಂದ ದೊರೆತಿದೆ.

ಕೋರ್ಟ್ ಮೊರೆ ಹೋಗಲು ರಮೇಶ್ ಜಾರಕಿಹೊಳಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಇಂದು ಅಥವಾ ನಾಳೆ ವಕೀಲರ ಮೂಲಕ ಸಿಆರ್‌ಪಿಸಿ 438 ಅಡಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವಂತೆ ಸಹೋದರನಿಗೆ ಬಾಲಚಂದ್ರ ಸಲಹೆ ನೀಡಿದ್ದು, ಮುಂದಿನ ನಡೆ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಸಹೋದರನ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿರುವ ಬಾಲಚಂದ್ರ ಜಾರಕಿಹೊಳಿ, ಇಷ್ಟು ದಿನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ನಿನ್ನೆ ನ್ಯಾಯಾಧೀಶರ ಮುಂದೆ ಯುವತಿ ಹೇಳಿಕೆ ದಾಖಲಿಸಿದ ಬೆನ್ನಲ್ಲೆ, ಅನಿವಾರ್ಯವಾಗಿ ಕೋರ್ಟ್ ಮೊರೆ ಹೋಗಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವ ಮಾತು ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.

ಬೆಂಗಳೂರು ತೊರೆದ ಜಾರಕಿಹೊಳಿ‌:ಎರಡು ದಿನದ ಹಿಂದೆಯೇ ಬೆಂಗಳೂರಿನಿಂದ ಹೊರಹೋಗಿರುವ ರಮೇಶ್ ಜಾರಕಿಹೊಳಿ‌, ಬೆಳಗಾವಿ ಮೂಲಕ ಮುಂಬೈಗೆ ಹೋಗಿರಬಹುದು ಎನ್ನಲಾಗುತ್ತಿದೆ. ಯುವತಿಯ ವಿಚಾರಣೆ ನಡೆಯುತ್ತಿರುವ ವೇಳೆ ಜಾರಕಿಹೊಳಿ‌ ಬೆಂಗಳೂರು‌ ತೊರೆದಿದ್ದಾರೆ.

ಓದಿ:ಸಿಡಿ ಪ್ರಕರಣ: ಮೆಡಿಕಲ್ ಟೆಸ್ಟ್​ಗೆ ಯುವತಿಯನ್ನ ಬೌರಿಂಗ್ ಆಸ್ಪತ್ರೆಗೆ ಕರೆತಂದ ಎಸ್ಐಟಿ

ABOUT THE AUTHOR

...view details