ಬೆಂಗಳೂರು: ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಜ್ಞಾನಭಾರತಿ ಪೊಲೀಸರು ಹೊರಡಿಸಿದ್ದ ನೋಟಿಸ್ಗೆ ಐಟಿ ಅಧಿಕಾರಿಗಳು ಉತ್ತರಿಸಿದ್ದು, ಅದಕ್ಕೆ ಸಮಯಾವಕಾಶ ನೀಡುವಂತೆ ಕೇಳಿದ್ದಾರೆ.
ರಮೇಶ್ ಬರೆದಿಟ್ಟ ಡೆತ್ನೋಟ್ ಹಾಗೂ ಕುಟುಂಬಸ್ಥರ ಆರೋಪಕ್ಕೆ ಉತ್ತರಿಸುವಂತೆ ಐಟಿ ಅಧಿಕಾರಿಗಳಿಗೆ ಜ್ಞಾನಭಾರತಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಆದ್ರೆ, ಐಟಿ ಅಧಿಕಾರಿಗಳು ನಾವು ನಿಮಗೆ ಯಾವುದೇ ಮಾಹಿತಿ ಕೊಡಲು ಆಗುವುದಿಲ್ಲ. ತನಿಖೆಗೆ ಸಹಕರಿಸುತ್ತೇವೆ. ಅದಕ್ಕೆ ಕಾಲಾವಕಾಶ ಕೊಡಿ ಎಂದು ಕೇಳಿದ್ದಾರೆ. ಈ ಮಾಹಿತಿ ಪೊಲೀಸ್ ಮೂಲಗಳಿಂದ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ.