ಬೆಂಗಳೂರು:ವಿಚಾರಣೆಗೆ ಹಾಜರಾಗದೆ ಪ್ರಕರಣ ಹಿಂಪಡೆಯಲು ವಕೀಲರಿಗೆ ಒತ್ತಡ ಹೇರಿದ್ದಾರೆ ಎಂಬ ಸಿಡಿ ಯುವತಿಯ ಆರೋಪ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಗೌಪ್ಯವಾಗಿ ವಿಚಾರಣೆಗೆ ಹಾಜರಾಗಿದ್ದಾರೆ.
ಮೂರು ದಿನಗಳ ಹಿಂದೆ ಎಸ್ಐಟಿ ಅಧಿಕಾರಿಗಳ ಮುಂದೆ ಜಾರಕಿಹೊಳಿ ಸದ್ದಿಲ್ಲದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಕೊರೊನಾ ಅಲೆಯ ನಿಯಂತ್ರಣಕ್ಕೆ ಕರ್ಫ್ಯೂ ಜಾರಿಗೊಳಿಸಿದ ಬಳಿಕ ಸಿಡಿ ಪ್ರಕರಣದ ತನಿಖೆ ಮರೆಯಾಗಿತ್ತು. ಅಲ್ಲದೇ ಎಸ್‌ಐಟಿಯ ಬಹಳಷ್ಟು ಅಧಿಕಾರಿಗಳನ್ನು ಕರ್ಫ್ಯೂ ಡ್ಯೂಟಿಗೆ ನಿಯೋಜಿಸಲಾಗಿತ್ತು. ಉಪ ಚುನಾವಣೆ ಫಲಿತಾಂಶದ ಬಳಿಕ ಒಮ್ಮೆ ಎಸ್ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದ ಜಾರಕಿಹೊಳಿ, ಇದೀಗ ಯಾರಿಗೂ ತಿಳಿಯದಂತೆ ಮತ್ತೊಮ್ಮೆ ಹಾಜರಾಗಿದ್ದಾರೆ.