ಕರ್ನಾಟಕ

karnataka

ETV Bharat / city

ಬೆಂಗಳೂರು-ಎಲ್ಲೆಡೆ ಶ್ರೀರಾಮ ನವಮಿ ಸಡಗರ: ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯ - ರಾಮ ರಥಯಾತ್ರೆ

ನಾಡಿನೆಲ್ಲೆಡೆ ಇಂದು ರಾಮ ನವಮಿ ಸಡಗರ ಮನೆ ಮಾಡಿದೆ. ಶ್ರೀ ರಾಮನ ದೇವಸ್ಥಾನಗಳಲ್ಲಿ ಹಬ್ಬದ ವಾತಾವರಣವಿದ್ದು, ಬಗೆ ಬಗೆಯ ಹೂಗಳಿಂದ ದಶರಥ ಪುತ್ರನಿಗೆ ಅಲಂಕಾರ ಮಾಡಲಾಗಿದೆ.

Rama Navami  celebration in Bengaluru
ರಾಮ ನವಮಿ

By

Published : Apr 10, 2022, 10:09 AM IST

ಬೆಂಗಳೂರು: ರಾಜ್ಯದಲ್ಲಿ ಇಂದು ಶ್ರೀರಾಮ ನವಮಿ ಸಡಗರ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಲಾಗುತ್ತಿದೆ. ಬಗೆ ಬಗೆಯ ಹೂಗಳಿಂದ ದಶರಥ ಪುತ್ರನಿಗೆ ಅಲಂಕಾರ ಮಾಡಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಲಾಗುತ್ತಿದೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷ ಸಾರ್ವಜನಿಕ ಆಚರಣೆ ಇರಲಿಲ್ಲ. ಈ ಬಾರಿ ಆಚರಣೆ ಕಳೆಗಟ್ಟಿದೆ.

ರಾಮ ನವಮಿ: ದೇಗುಲಗಳಲ್ಲಿ ವಿಶೇಷ ಪೂಜೆ

ಮುಂಜಾನೆಯಿಂದಲೇ ದೇಗುಲಗಳತ್ತ ಭಕ್ತರು ಬರುತ್ತಿದ್ದು, ಶ್ರೀರಾಮ, ಹನುಮ ಮಂದಿರಗಳ ಬಳಿ ಭಕ್ತರ ದಂಡು ಹೆಚ್ಚಾಗಿದೆ. ಶ್ರೀ ರಾಮನ ದೇವಸ್ಥಾನಗಳಲ್ಲಿ ಸಡಗರದ ವಾತಾವರಣ ಮನೆಮಾಡಿದೆ. ಅಲ್ಲದೇ ಪಾನಕ, ಕೋಸಂಬರಿ, ಮಜ್ಜಿಗೆ ತಯಾರಿಸಿ ಹಂಚಲಾಗುತ್ತಿದೆ.

ಹಿಂದೂಪರ ಸಂಘಟನೆಗಳಿಂದ ಭರ್ಜರಿ ಆಚರಣೆ:ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳಿಂದ ಅದ್ದೂರಿಯಾಗಿ ಉತ್ಸವ ಮಾಡಲಾಗುತ್ತಿದೆ. ಗಲ್ಲಿ ಗಲ್ಲಿಗಳಲ್ಲೂ ಅಯೋಧ್ಯಾಧಿಪತಿಯ ಸ್ಮರಣೆ ಮಾಡಲಾಗುತ್ತಿದೆ.

ಮಾಂಸ ಮಾರಾಟವಿಲ್ಲ: ರಾಜಧಾನಿಯಲ್ಲಿ ಮಾಂಸ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ. ಹಲವೆಡೆ ಮೆರವಣಿಗೆ ಹೊರಡುವ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ರಾಮ ರಥಯಾತ್ರೆ: ಸಚಿವ ಆರ್​​. ಅಶೋಕ್ ನೇತೃತ್ವದಲ್ಲಿ ರಾಮ ನವಮಿಯ ಪ್ರಯುಕ್ತ ನಗರದಲ್ಲಿ ರಾಮ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​ವೈ ಸೇರಿ ಹಲವು ಸಚಿವರು, ಶಾಸಕರು ಹಾಗೂ ಮುಖಂಡರು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ:ಶೋಭಾಯಾತ್ರೆಯಲ್ಲಿ ಡಿಜೆಗೆ ನಿರ್ಬಂಧ, ಪ್ರಚೋದನಕಾರಿ ಭಾಷಣ ಮಾಡಿದ್ರೆ ಕ್ರಮ: ಎಸ್​​ಪಿ ವಂಶಿಕೃಷ್ಣ

ABOUT THE AUTHOR

...view details