ಕರ್ನಾಟಕ

karnataka

ETV Bharat / city

ಪುನೀತ್‌ಗೆ ಪದ್ಮಶ್ರೀ ನೀಡುವಂತೆ ಪ್ರಧಾನಿಗೆ ರಕ್ಷಾ ರಾಮಯ್ಯ ಒತ್ತಾಯ; ಗವರ್ನರ್‌ ಮೂಲಕ ಮನವಿ - ಬೆಂಗಳೂರು

ಅಕ್ಟೋಬರ್‌ 29 ರಂದು ಹೃದಯಾಘಾತದಿಂದ ನಿಧನರಾಗಿದ್ದ ನಟ ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರವಾಗಿ ಪದಶ್ರೀ ಪ್ರಶಸ್ತಿ ನೀಡಬೇಕೆಂದು ಕೆಪಿವೈಸಿಸಿ ಅಧ್ಯಕ್ಷ ರಕ್ಷಾ ರಾಮಯ್ಯ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ರಾಜ್ಯಪಾಲ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.

Raksha ramaiah meets Karnataka governor and demanding padmashree for puneeth rajkumar
ಪುನೀತ್‌ಗೆ ಪದ್ಮಶ್ರೀ ನೀಡುವಂತೆ ಪ್ರಧಾನಿಗೆ ರಕ್ಷಾ ರಾಮಯ್ಯ ಒತ್ತಾಯ; ಗವರ್ನರ್‌ ಮೂಲಕ ಮನವಿ

By

Published : Nov 19, 2021, 12:42 AM IST

ಬೆಂಗಳೂರು: ಇತ್ತೀಚೆಗೆ ವಿಧಿವಶರಾದ ನಟ ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ.

ತಮ್ಮ ಶಾಲಾ ಒಡನಾಡಿ ಹಾಗೂ ಎಲ್ಲರ ಮೆಚ್ಚಿನ ಪುನಿತ್ ರಾಜ್ ಕುಮಾರ್ ಅವರಿಗೆ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಮರಣೋತ್ತವಾಗಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರಕ್ಷಾ ರಾಮಯ್ಯ ಪತ್ರ ಬರೆದಿದ್ದಾರೆ.

ರಾಜಭವನದಲ್ಲಿ ನಿನ್ನೆ ರಾಜ್ಯಪಾಲ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದ ರಕ್ಷಾ ರಾಮಯ್ಯ ನೇತೃತ್ವದ ನಿಯೋಗ ಈ ಮೂರು ಪತ್ರಗಳನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದರು.

ಪುನೀತ್‌ ರಾಜ್‌ಕುಮಾರ್‌ ಅವರ ಹಠಾತ್ ನಿಧನಕ್ಕೆ ನಾಡಿನ ಲಕ್ಷಾಂತರ ಜನ ಕಂಬನಿ ಮಿಡಿದಿದ್ದಾರೆ. ಅವರು ನಾಡಿನ ಸಾಂಸ್ಕೃತಿಕ ಐಕಾನ್ ಆಗಿದ್ದರು. 6 ತಿಂಗಳ ಮಗುವಾಗಿದ್ದ ಸಮಯದಿಂದಲೇ ನಟನೆ ಆರಂಭಿಸಿ ಹಲವಾರು ಚಿತ್ರಗಳಲ್ಲಿ ಮನೋಜ್ಞ ಅಭಿಯನ ಮಾಡಿದ್ದರು. ತಮ್ಮ ಬ್ಯಾನರ್ ಅಡಿ ಹೊಸ ಸಿನೆಮಾ ಮತ್ತು ಹೊಸ ಪ್ರತಿಭೆಗಳನ್ನು ಶೋಧಿಸಿ ಅವಕಾಶ ನೀಡುತ್ತಿದ್ದರು.

ಮಕ್ಕಳು, ಹಿರಿಯ ನಾಗರಿಕರು, ಸಮಾಜದ ನಿರ್ಲಕ್ಷಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿಯೂ ಅವರು ಸೇವೆ ಸಲ್ಲಿಸಿದ್ದರು. ನಾಡಿನ ಜನರ ಹೃದಯ ಗೆದ್ದಿರುವ ಯುವ ನಾಯಕ ಪುನೀತ್‌ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಎಂ.ಎಸ್. ರಕ್ಷಾ ರಾಮಯ್ಯ ಕೋರಿದ್ದಾರೆ.

ABOUT THE AUTHOR

...view details