ಬೆಂಗಳೂರು: ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸನಾತನ ಸಂಸ್ಥೆಯ ಮಹಿಳೆಯರು ರಾಖಿ ಕಟ್ಟಿ ಶುಭ ಕೋರಿದರು. ನಿನ್ನೆ ಮೈಸೂರು, ಮಂಡ್ಯ ಪ್ರವಾಸಕ್ಕೆ ಸಿಎಂ ತೆರಳಿದ್ದ ಹಿನ್ನೆಲೆಯಲ್ಲಿ ಇಂದು ರಾಖಿ ಕಟ್ಟಲಾಯಿತು.
ಸಿಎಂ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ - ಸಿಎಂಗೆ ರಾಖಿ ಕಟ್ಟಿದ ಸನಾತನ ಸಂಸ್ಥೆಯ ಮಹಿಳೆಯರು
ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಸನಾತನ ಸಂಸ್ಥೆಯ ಮಹಿಳೆಯರು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ರಕ್ಷಾ ಬಂಧನದ ಶುಭ ಕೋರಿ, ರಾಖಿ ಕಟ್ಟಿದರು.

Raksha bandhan celebration
ಆರ್ ಟಿ ನಗರದಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ಸನಾತನ ಸಂಸ್ಥೆಯ ಮಹಿಳೆಯರು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ರಕ್ಷಾ ಬಂಧನದ ಶುಭ ಕೋರಿ, ರಾಖಿ ಕಟ್ಟಿದರು. ರಾಖಿ ಕಟ್ಟಿದ ಸಹೋದರಿಯರೆಲ್ಲರಿಗೂ ಒಳ್ಳೆಯದಾಗಲಿ ಎಂದು ಸಿಎಂ ಶುಭ ಹಾರೈಸಿ, ಸಿಹಿ ವಿತರಿಸಿ ಬೀಳ್ಕೊಟ್ಟರು.
ಇದನ್ನೂ ಓದಿ:ನಟ ಯಶ್ ಮನೆಯಲ್ಲಿ ರಕ್ಷಾ ಬಂಧನ ಸಂಭ್ರಮ: ಫೋಟೋಗಳನ್ನು ನೋಡಿ