ಕರ್ನಾಟಕ

karnataka

ETV Bharat / city

ಬಿಡುಗಡೆ ಬೆನ್ನಲ್ಲೇ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ - ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜಣ್ಣ

ಬಿ.ವೈ‌.ವಿಜಯೇಂದ್ರ ಪೊಲೀಸರಿಗೆ ದೂರು ಕೊಡುವ‌ ಮುನ್ನ ನನ್ನನ್ನು ಕರೆಯಿಸಿ ಮಾತನಾಡಬಹುದಿತ್ತು. ಕಳೆದ 20 ವರ್ಷಗಳಿಂದ ಶ್ರೀರಾಮುಲು ಬಳಿ ಕೆಲಸ ಮಾಡುತ್ತಿದ್ದೇನೆ. ನಾನು ಎಂದಿಗೂ ಅವರಿಗೆ ಕಳಂಕ ತರುವ ಕೆಲಸ ಮಾಡುವುದಿಲ್ಲ ಎಂದು ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜಣ್ಣ ತಿಳಿಸಿದ್ದಾರೆ.

Rajanna
ರಾಜಣ್ಣ

By

Published : Jul 2, 2021, 6:52 PM IST

Updated : Jul 2, 2021, 7:03 PM IST

ಬೆಂಗಳೂರು: ಸಚಿವರು ಮತ್ತು ಸಿಎಂ‌ ಕಚೇರಿ ಹೆಸರು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜಣ್ಣನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದು, ಈ ಕುರಿತು ತಮ್ಮ ಫೇಸ್​ಬುಕ್​ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡ ರಾಜಣ್ಣ

ರಾಜಣ್ಣ ಬರೆದ ಬರಹ ಹೀಗಿದೆ..

ಕಳೆದ 24 ಗಂಟೆಯಿಂದ ನಡೆಯುತ್ತಿರುವ ವಿದ್ಯಮಾನಗಳ ಕುರಿತು ವಾಸ್ತವ ಸಂಗತಿ ಹಾಗೂ ಸತ್ಯಂಶವನ್ನ ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ. ಸುಮಾರು 20 ವರ್ಷಗಳಿಂದ ಸಚಿವ ಬಿ.ಶ್ರೀರಾಮುಲು ಅವರ ನೆರಳಿನಲ್ಲಿ ಬದುಕುತ್ತಿದ್ದೇನೆ. ಸಚಿವರು ಪ್ರಾಮಾಣಿಕವಾಗಿ ನೂರಾರು ಮಂದಿಗೆ ಅಳಿಲು ಸೇವೆ ಸಲ್ಲಿಸುತ್ತಿದ್ದು, ಅವರ ಜೊತೆ ಒಬ್ಬನಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಶ್ರೀರಾಮುಲು ಅಥವಾ ಬೇರೆ ಯಾವುದೇ ನಾಯಕರಿಗೆ ಕಳಂಕ ತರುವ ಕೆಲಸ ಎಂದೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಕುರಿತ ಯಾವುದೇ ಆಡಿಯೋದಲ್ಲಿ ನಾನು ಭಾಗಿಯಾಗಿಲ್ಲ. ಪೊಲೀಸರು ಈ ಕುರಿತು ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ವಿಚಾರಣೆ ವೇಳೆ ನನ್ನದು ಎನ್ನಲಾದ ಆಡಿಯೋ ಕೇಳಿಸಿದರು. ಅಡಿಯೋದಲ್ಲಿ ಇರುವ ಧ್ವನಿ ನನ್ನದಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ಮನವರಿಕೆಯಾಗಿದೆ. ನನ್ನ ಕುರಿತ ಸತ್ಯಾಂಶ ಅವರಿಗೆ ಮನವರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಸಚಿವರ ಸೇವೆ ಜೊತೆಗೆ ಪ್ರಾಮಾಣಿಕವಾಗಿ ಅಳಿಲು ಸೇವೆ ಸಲ್ಲಿಸಲು ಬಂದವರಲ್ಲಿ ನಾನು ಒಬ್ಬ. ಕಳೆದ ಒಂದು ದಿನದಿಂದ ನಡೆದ ಬೆಳವಣಿಗೆಗಳು ಹಾಗೂ ವರದಿಗಳು ಸತ್ಯಕ್ಕೆ ದೂರವಾಗಿದ್ದು, ನಾನು ಆಘಾತಕ್ಕೆ ಒಳಗಾಗಿದ್ದೇನೆ. ನನ್ನ ಕುಟುಂಬವೂ ನೋವಿನಲ್ಲಿದೆ. ತಪ್ಪು ಗ್ರಹಿಕೆಯಿಂದ ವಿಜಯೇಂದ್ರ ಅವರು ದೂರು ಸಲ್ಲಿಸುವ ಮುನ್ನ ನನ್ನನು ಕರೆಯಿಸಿ ಮಾತನಾಡಿದ್ದರೆ ವಾಸ್ತವಾಂಶ ಹಾಗೂ ಸತ್ಯಾಸತ್ಯತೆ ಗೊತ್ತಾಗಿರುತ್ತಿತ್ತು. ಈ ಪ್ರಕರಣದಲ್ಲಿ ನಾನು ಭಾಗಿಯಲ್ಲ, ಯಾವುದೇ ತಪ್ಪು ಮಾಡಿಲ್ಲ. ನಾನು ಕಷ್ಟ ಪಟ್ಟು ದುಡಿದುಕೊಂಡು ಬದುಕುವ ವ್ಯಕ್ತಿ. ಅಡ್ಡದಾರಿ ಹಿಡಿಯುವವನಲ್ಲ. ಬದುಕಿಗಾಗಿ ಕಷ್ಟಪಟ್ಟು ದುಡಿಯುತ್ತೇವೆಯೇ ಹೊರತು ಅಡ್ಡದಾರಿ ಹಿಡಿದು ಬದುಕುವವರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಶ್ರೀರಾಮುಲು ಪಿಎ ವಂಚನೆ ಆರೋಪ ಪ್ರಕರಣ : ಒಂದೇ ದಿನಕ್ಕೆ ವಿಚಾರಣೆ ಮುಗಿಸಿ ಬಿಟ್ಟು ಕಳುಹಿಸಿದ ಸಿಸಿಬಿ

Last Updated : Jul 2, 2021, 7:03 PM IST

ABOUT THE AUTHOR

...view details