ಕರ್ನಾಟಕ

karnataka

ETV Bharat / city

ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ - ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೆ ಮಳೆ

ಉತ್ತರ ಒಳನಾಡಿನಲ್ಲಿ ಜ. 14ರಿಂದ 17ರವರೆಗೂ ಒಣಹವೆ ಮುಂದುವರೆಯಲಿದೆ. ದಕ್ಷಿಣ ಒಳನಾಡಿನಲ್ಲಿ 13, 14, 17ರಂದು ಒಣಹವೆ ಇರಲಿದ್ದು, ಜ. 15, 16ರಂದು ಮಳೆಯಾಗಲಿದೆ.

rains-expected-again-tomorrow-in-karnataka-coastal-districts
ಹವಾಮಾನ ಇಲಾಖೆ ಮುನ್ಸೂಚನೆ

By

Published : Jan 13, 2021, 8:53 PM IST

ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೆ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ಮುನ್ಸೂಚನೆ

ಈ ಬಗ್ಗೆ ಮಾತನಾಡಿದ ಹವಾಮಾನ ಮುನ್ಸೂಚನೆ ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್, ರಾಜ್ಯಾದ್ಯಂತ ಇಂದು ಒಣಹವೆ ಮುಂದುವರೆದಿದೆ. ಕರಾವಳಿ ಜಿಲ್ಲೆಗಳಲ್ಲಿ ಜ. 14ರಿಂದ 16ರವರೆಗೆ ಅಲ್ಲಲ್ಲಿ ಹಗುರ ಮಳೆಯಗಲಿದೆ. 17ರಂದು ಒಣಹವೆ ಇರಲಿದೆ ಎಂದರು.

ಓದಿ: ಸಚಿವ ಸ್ಥಾನ ಕಳೆದುಕೊಂಡ ನಾಗೇಶ್​ಗೆ ಗಿಫ್ಟ್​: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ ಸಿಎಂ!

ಉತ್ತರ ಒಳನಾಡಿನಲ್ಲಿ ಜ. 14ರಿಂದ 17ರವರೆಗೂ ಒಣಹವೆ ಮುಂದುವರೆಯಲಿದೆ. ದಕ್ಷಿಣ ಒಳನಾಡಿನಲ್ಲಿ 13, 14, 17ರಂದು ಒಣಹವೆ ಇರಲಿದ್ದು, ಜ. 15, 16ರಂದು ಮಳೆಯಾಗಲಿದೆ. ಬೆಂಗಳೂರಿನಲ್ಲಿ ಕನಿಷ್ಠ ಹಾಗೂ ಗರಿಷ್ಠ ಉಷ್ಣಾಂಶ ಕ್ರಮವಾಗಿ 15-17 ಹಾಗೂ 25-27 ಡಿಗ್ರಿ ಸೆಂಟಿಗ್ರೇಡ್ ಇರುವ ಸಾಧ್ಯತೆ ಇದೆ ಎಂದರು.

ABOUT THE AUTHOR

...view details