ಬೆಂಗಳೂರು: ಪ್ರವಾಹದಿಂದ ಮನೆ ಹಾನಿಗೆ ಒಳಗಾದ ನಾಗರಿಕರಿಗೆ ಪರಿಹಾರ ಒದಗಿಸುವ ಕಾಲಮಿತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಡಿಸೆಂಬರ್ 7ಕ್ಕೆ ಅಂತಿಮ ಗಡುವು ವಿಸ್ತರಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
RGRHCL ತಂತ್ರಾಶದಲ್ಲಿ ಮನೆ ಹಾನಿಗೆ ಒಳಗಾದ ಪ್ರಕರಣಗಳ ವಿವರ ಹಾಗೂ ಬೆಳೆ ಹಾನಿಯ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ನಿಯಮಾನುಸಾರ ದಾಖಲಿಸಲು ಸೂಚಿಸಲಾಗಿದೆ. ಇದೇ ವರ್ಷ ಅಕ್ಟೋಬರ್ 13ರಂದು ಹೊರಡಿಸಿದ ಸುತ್ತೋಲೆಯಲ್ಲಿ ಪ್ರವಾಹದಿಂದ ಮನೆ ಹಾನಿಯಾದ ಪ್ರಕರಣಗಳ ಎ, ಬಿ ಮತ್ತು ಸಿ ವರ್ಗವಾರು ವಿವರಗಳನ್ನು RGRHCL ತಂತ್ರಾಶದಲ್ಲಿ ಅಕ್ಟೋಬರ್ 30ರ ಒಳಗೆ ದಾಖಲಿಸುವಂತೆ ತಿಳಿಸಲಾಗಿತ್ತು.