ಬೆಂಗಳೂರು:ರಾಜಧಾನಿಯಲ್ಲಿ ಸಂಜೆ 4:30ರ ಸುಮಾರಿಗೆ ದಿಢೀರ್ ಮಳೆ ಶುರುವಾಗಿದೆ. ಮಳೆಯಿಂದಾಗಿ ವೀಕೆಂಡ್ ಮೂಡ್ನಲ್ಲಿದ್ದವರಿಗೆ ಕಿರಿಕಿರಿ ಆಗಿದೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ನಗರದ ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಆನಂದ್ ರಾವ್ ಸರ್ಕಲ್, ಶೇಷಾದ್ರಿ ಪುರಂ, ಮಹಾಲಕ್ಷ್ಮಿ ಲೇಔಟ್ , ರಾಜಾಜಿ ನಗರ ಸುತ್ತಮುತ್ತ ಗುಡುಗು ಸಹಿತ ಮಳೆ ಸುರಿದಿದೆ.
ಮುಂದಿನ 3 ದಿನ ಸಾಧಾರಣ ಮಳೆ ಸಾಧ್ಯತೆ:
ದಕ್ಷಿಣ ಭಾರತದ ಮೇಲೆ ಮೇಲ್ಮೈ ಸುಳಿಗಾಳಿ ಹಾಗೂ ಟ್ರಫ್ ಕಾಣಿಸಿಕೊಂಡಿದ್ದು, ಇನ್ನು ಮೂರು ದಿನಗಳ ಕಾಲ ಕೆಲ ಭಾಗದಲ್ಲಿ ಮಾತ್ರ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ. ಮುಂಗಾರು ಹೋಗಿ ಹಿಂಗಾರು ಚುರುಕಾಗಿದ್ದು, ಕರ್ನಾಟಕದಲ್ಲಿ ಅಕ್ಟೋಬರ್ 6ರ ವರೆಗೆ ಮಳೆಯಾಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಉತ್ತರಾಖಂಡ ಹಿಮಪಾತ.. ನಾಲ್ವರು ಭಾರತೀಯ ನೌಕಾಪಡೆಯ ಅಧಿಕಾರಿಗಳ ಮೃತದೇಹ ಪತ್ತೆ..