ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗ್ತಿದ್ದು, ಈ ಹಿನ್ನೆಲೆಯಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ ಮೇ 30 ರವರೆಗೆ ಮುಂದುವರಿಯಲಿದೆ. ಪ್ರಯಾಣಿಕರು ಅನಗತ್ಯವಾಗಿ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ಗಳಿಗೆ ಬರುವುದನ್ನು ತಪ್ಪಿಸಲು ಟಿಕೆಟ್ ದರವನ್ನು ಹೆಚ್ಚಿಸಲಾಗಿತ್ತು.
ಮೇ 30ರವರೆಗೆ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ದರ 50 ರೂ. ಮುಂದುವರಿಕೆ
ಯಲಹಂಕದಲ್ಲಿರುವ ಗಣಕೀಕೃತ ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವ ಕೇಂದ್ರವು ಇಂದಿನಿಂದ ಪುನಾರಂಭಗೊಳ್ಳುತ್ತದೆ. ಇದನ್ನು ಕೋವಿಡ್ ಕಾರಣಕ್ಕೆ ಸ್ಥಗಿತಗೊಳಿಸಲಾಗಿತ್ತು.
ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಯಶವಂತಪುರ ಮತ್ತು ಕೃಷ್ಣರಾಜಪುರಂ ರೈಲ್ವೆ ನಿಲ್ದಾಣಗಳಲ್ಲಿ ಏಪ್ರಿಲ್ 30 ರವರೆಗೆ ಪ್ಲಾಟ್‌ಫಾರ್ಮ್ ಟಿಕೆಟ್ ದರಗಳನ್ನು 10 ರೂ.ನಿಂದ 50 ರೂ. ವರೆಗೆ ಏರಿಸಲಾಗಿತ್ತು. ಆದರೆ, ಈಗ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ಇದೇ ದರ ಮೇ 30ರವರೆಗೆ ಮುಂದುವರಿಯುತ್ತದೆ.
ಇನ್ನು ಯಲಹಂಕದಲ್ಲಿರುವ ಗಣಕೀಕೃತ ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವ ಕೇಂದ್ರವು ಇಂದಿನಿಂದ ಪುನಾರಂಭಗೊಳ್ಳುತ್ತದೆ. ಇದನ್ನು ಕೋವಿಡ್ ಕಾರಣಕ್ಕೆ ಸ್ಥಗಿತಗೊಳಿಸಲಾಗಿತ್ತು.
(ಬೆಚ್ಚಿಬಿದ್ದ ಕರ್ನಾಟಕ - ಒಂದೇ ದಿನ 48 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ: 217 ಜನ ಬಲಿ)