ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಎದ್ದಿರುವ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜಾನ ಗರ್ಲಾನಿ ಹೆಸರು ತಳುಕು ಹಾಕಿಕೊಳ್ತಿದ್ದಂತೆ ಎಚ್ಚೆತ್ತ ನಟಿ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಅಲ್ಲದೆ ಸಂಜನಾ ಮಾಧ್ಯಮದವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ.
ಕೊನೆಗೂ ಸಿಸಿಬಿ ಕಸ್ಟಡಿಯಲ್ಲಿ ಇರುವ ಆಪ್ತ ರಾಹುಲ್ ಬಗ್ಗೆ ನಟಿ ಸಂಜನಾ ಬಾಯ್ಬಿಟ್ಟಿದ್ದಾರೆ. ರಾಹುಲ್ ತುಂಬಾ ಅಮಾಯಕ, ಮೂರು ವರ್ಷಗಳಿಂದ ರಾಹುಲ್ ನನಗೆ ಪರಿಚಯ. ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡ್ತಾನೆ. ಅಲ್ಲದೆ ಪೊಲೀಸರ ಮೇಲೆ ನನಗೆ ನಂಬಿಕೆ ಇದೆ, ನೊಟೀಸ್ ಬಂದ್ರೆ ನಾನು ತನಿಖೆಗೆ ಸಹಕರಿಸುತ್ತೇನೆ ಎಂದರು.