ಬೆಂಗಳೂರು :ಗೂಂಡಾಗಳನ್ನು ಮಟ್ಟ ಹಾಕುಲು ಏನು ಬೇಕೋ ಅದನ್ನು ಮಾಡುತ್ತಿದ್ದೇವೆ. ಕೊಲೆ ಹಿಂದು ಆಗಿರಬಹುದು, ಮುಸ್ಲಿಂ ಆಗಿರಬಹುದು. ಸರ್ಕಾರ ನಡೆಸುವವರು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಕುರಿತು ಹಿಂದೆ ಮುಂದೆ ಏನೂ ನೋಡಲ್ಲ. ಯಾವುದೇ ಕನಿಕರ, ಯಾವುದೇ ಕರ್ಟಸಿ ಯಾರ ಮೇಲೂ ತೋರಿಸಲ್ಲ. ವಿಪಕ್ಷಗಳು ಅವರ ಕಾಲದಲ್ಲಿ ಏನಾಯ್ತು ಅಂತ ಮುಚ್ಚಿಟ್ಟು, ಈಗ ಏನಾಯ್ತು ಅಂತ ಕಾಮೆಂಟ್ ಮಾಡೋಕು ಮುನ್ನ ಯೋಚನೆ ಮಾಡಬೇಕು. ಶಿವಾಜಿನಗರದಲ್ಲಿ ಹಾಡುಹಗಲೇ ಕೊಲೆ ಆಯ್ತು ಸಿದ್ದರಾಮಯ್ಯ ಸರ್ಕಾರ ಇತ್ತು. ಆಗ ಏನು ಮಾಡ್ತಾ ಇದ್ರು ಸಿದ್ಧರಾಮಯ್ಯ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಕೆಲವು ಸಂಘಟನೆಗಳಿಗೆ ಫಂಡ್ ಮಾಡುತ್ತೆ ಅನ್ನೋದನ್ನು ಅಲ್ಲಗಳೆಯುತ್ತೇನೆ. ನಮ್ಮ ಸರ್ಕಾರ ಬಂದ ನಂತರ ಕಾನೂನು ಸುವ್ಯವಸ್ಥೆ ಸರಿ ಮಾಡಿದ್ದೇವೆ. ಕೋಮು ಗಲಭೆಗೆ ಎಂದೂ ನಾವು ಅವಕಾಶ ಕೊಡಲ್ಲ. ಭಟ್ಕಳ, ಕರಾವಳಿ ಪ್ರದೇಶದಲ್ಲಿ ಹಿಂದೆಯಿಂದಲೂ ಈ ರೀತಿ ನಡೀತಾ ಇದೆ. ನಮ್ಮ ಸರ್ಕಾರ ಬಂದ ಮೇಲೆ ಒಂದಿಷ್ಟು ಕಂಟ್ರೋಲ್ ಆಗಿದೆ. ಉದ್ವೇಗದಲ್ಲಿ ಯಾರು ಬೇಕಾದರೂ ಎನ್ಕೌಂಟರ್ ವಿಚಾರ ಹೇಳಬಹುದು ಎಂದರು.