ಕರ್ನಾಟಕ

karnataka

ETV Bharat / city

ಅಂಗನವಾಡಿ ಕಾರ್ಯಕರ್ತೆಯರ ಮನವಿ ಸ್ವೀಕರಿಸಿದ ಆರ್.​ ಅಶೋಕ್: ಬೇಡಿಕೆ ಈಡೇರಿಸುವ ಭರವಸೆ - received the request of Anganwadi

ಬಜೆಟ್​ನಲ್ಲಿ ಗೌರವ ಧನ ಹೆಚ್ಚಳ ಮಾಡಲು ಮನವಿ ಮಾಡಿದ್ದೀರಿ, ಕೋವಿಡ್ ಸಂದರ್ಭದಲ್ಲಿಯೂ ಧೈರ್ಯವಾಗಿ ಓಡಾಡಿದ್ದೀರಿ. ಕೋವಿಡ್ ನಿಂದ ಮೃತಪಟ್ಟಾಗ ಪರಿಹಾರ ಕೊಡುವ ಬಗ್ಗೆ, ಮೂಲಸೌಕರ್ಯ ಒದಗಿಸುವ ಬಗ್ಗೆ ಮನವಿ ಕೊಟ್ಟಿದ್ದು, ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

r-ashok-who-has-received-the-request-of-anganwadi-workers
ಆರ್.​ ಅಶೋಕ್

By

Published : Mar 2, 2021, 7:47 PM IST

ಬೆಂಗಳೂರು:ನಗರದ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಎಐಟಿಯುಸಿ ಹಾಗೂ ಎಐಯುಟಿಯುಸಿ ಸಂಘಟನೆಗಳ ಮನವಿ ಪತ್ರವನ್ನು ಕಂದಾಯ ಸಚಿವ ಆರ್. ಅಶೋಕ್ ಸ್ವೀಕರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ, ಸರ್ಕಾರದ ಪರವಾಗಿ ಮನವಿ ಸ್ವೀಕರಿಸಲು ಬಂದಿದ್ದೇನೆ. ಬಜೆಟ್​ನಲ್ಲಿ ಗೌರವ ಧನ ಹೆಚ್ಚಳ ಮಾಡಲು ಮನವಿ ಮಾಡಿದ್ದೀರಿ, ಕೋವಿಡ್ ಸಂದರ್ಭದಲ್ಲಿಯೂ ಧೈರ್ಯವಾಗಿ ಓಡಾಡಿದ್ದೀರಿ. ಕೋವಿಡ್​ಗೆ ಬಲಿಯಾದಾಗ ಪರಿಹಾರ ಕೊಡುವ ಬಗ್ಗೆ, ಮೂಲಸೌಕರ್ಯ ಒದಗಿಸುವ ಬಗ್ಗೆ ಮನವಿ ಕೊಟ್ಟಿದ್ದು, ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಲಾಗುತ್ತದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್​. ಅಶೋಕ್​​

ಕೋವಿಡ್ ಇರೋದ್ರಿಂದ ಎಚ್ಚರವಾಗಿರಬೇಕು ಎಂದು ಕೋರ್ಟ್ ಕೂಡ ಹೇಳಿದೆ. ಆರೋಗ್ಯ ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ಕೈಬಿಡುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಸಚಿವರು ಪ್ರತಿಭಟನಾಕಾರರಿಗೆ ಸಲಹೆ ನೀಡಿದರು.

ಸಭೆ ಬಳಿಕ ತೀರ್ಮಾನ:
ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕಿಯರ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲು, ನಾಳೆ ಬೆಳಗ್ಗೆ 11 ಗಂಟೆಗೆ ಸಚಿವರು ವಿಧಾನಸೌಧದಲ್ಲಿ ಸಭೆ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕರೆದಿರುವ ಸಭೆ ಬಳಿಕ ಪ್ರತಿಭಟನೆ ಕೈಬಿಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ತೀರ್ಮಾನಿಸಲಾಗಿದೆ.

ಇದನ್ನೂ ಓದಿ..ಸಂಚಲನ ಸೃಷ್ಟಿಸಿದ ರಾಜ್ಯ ಸಚಿವರ ಸಿಡಿ ಪ್ರಕರಣ; ಪೊಲೀಸರಿಗೆ ದೂರು ನೀಡಲು ಮುಂದಾದ RTI ಕಾರ್ಯಕರ್ತ

ಈ ಬಗ್ಗೆ ಮಾತನಾಡಿದ ಎಐಯುಟಿಯುಸಿ ರಾಜ್ಯಾಧ್ಯಕ್ಷ ಸೋಮಶೇಖರ್ ಯಾದಗಿರಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ದುಡಿಮೆಗೆ ತಕ್ಕನಾಗಿ ರಾಜ್ಯ ಸರ್ಕಾರ ಅವರನ್ನು ಸಿ ಮತ್ತು ಡಿ ದರ್ಜೆಯ ನೌಕರರೆಂದು ಘೋಷಿಸಬೇಕು. ಎಲ್ಲಾ ಕಾರ್ಯಕರ್ತೆಯರಿಗೆ 25,000, ಸಹಾಯಕಿಯರಿಗೆ 21,000ಕ್ಕೆ ಮಾಸಿಕ ಗೌರವಧನ ಹೆಚ್ಚಿಸಬೇಕು. ಐದು ವರ್ಷದ ಸೇವಾ ಹಿರಿತನಕ್ಕೆ ರೂ. 500 ಆದರೂ ವೇತನದ ವ್ಯತ್ಯಾಸ ಇರುವಂತೆ ಸ್ಲ್ಯಾಬ್ ರಚಿಸಬೇಕೆಂದು ಹೇಳಿದರು.

ABOUT THE AUTHOR

...view details