ಕರ್ನಾಟಕ

karnataka

ETV Bharat / city

ಸಿಎಂ ಗಂಡಸ್ತನದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ.. ಹೆಚ್​ಡಿಕೆಗೆ ಸಚಿವ ಆರ್. ಅಶೋಕ್ ಸಲಹೆ ಏನು? - R Ashok statement against kumarswami

ಸಿ ಎಂ ಕುಮಾರಸ್ವಾಮಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್ ಅಶೋಕ್ , ಕುಮಾರಸ್ವಾಮಿ ಅವರು ಮಾಜಿ ಸಿ ಎಂ ಆಗಿದ್ದವರು. ಈ ರೀತಿಯ ಭಾಷಾ ಪ್ರಯೋಗ ಅವರ ಘನತೆ ಮತ್ತು ಗೌರವಕ್ಕೆ ಶೋಭೆ ತರಲ್ಲ ಎಂದು ಹೇಳಿದ್ದಾರೆ.

r-ashok-statement-against-kumaraswami
ಗಂಡಸ್ತನದ ಬಗ್ಗೆ ಕುಮಾರಸ್ವಾಮಿ ಹೇಳಿಕೆ : ಈ ರೀತಿಯ ಪದಪ್ರಯೋಗ ಮಾಡಬಾರದು- ಸಚಿವ ಆರ್. ಅಶೋಕ್

By

Published : Mar 31, 2022, 7:51 PM IST

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವಿರುದ್ಧ ಗಂಡಸ್ತನದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್. ಅಶೋಕ್, ಕುಮಾರಸ್ವಾಮಿ ಅವರು ಮಾಜಿ ಸಿಎಂ ಆಗಿದ್ದವರು. ಈ ರೀತಿಯ ಭಾಷೆ ಬಳಸಿದ್ದು ಅವರ ಘನತೆ, ಗೌರವಕ್ಕೆ ಶೋಭೆ ತರಲ್ಲ ಎಂದಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಮೌನವಾಗಿಲ್ಲ. ಹಲಾಲ್ ಬಗ್ಗೆ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದ್ದಾರೆ.

ಸಿಎಂ ಆಗಿದ್ದವರು ಈ ರೀತಿಯ ಪದಪ್ರಯೋಗ ಮಾಡಬಾರದು. ಇದರಿಂದ ಸಮಾಜದ ಸಾಮರಸ್ಯ ಇನ್ನಷ್ಟು ಹಾಳಾಗುತ್ತದೆ. ಆಹಾರ ಪದ್ಧತಿ ಅವರ ವೈಯಕ್ತಿಕ ಅಷ್ಟೇ. ಮಾಂಸದ ವಿಚಾರಕ್ಕೆ ಸರ್ಕಾರ ಸ್ಪಷ್ಟವಾಗಿ ತನ್ನ ನಿಲುವನ್ನು ಹೇಳಿದೆ. ಈಗಾಗಲೇ ನಾನು ಸಹ ಹೇಳಿದ್ದೇನೆ. ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಯಾಕೆ ಬೀದಿ ರಂಪ ಮಾಡ್ತಿದ್ದೀರಾ..?. ಮೊದಲಿನಿಂದಲೂ ಹೇಗೆ ಇತ್ತೋ ಹಾಗೆ ನಡೆದುಕೊಂಡು ಹೋಗಲಿ ಎಂದು ಹೇಳಿದ್ದಾರೆ.

ಯಾರೋ ಬಂದು ಅರ್ಜಿ ಕೊಟ್ಟರೆ ಅದೇ ದೊಡ್ಡ ಸುದ್ದಿ ಆಗುತ್ತದೆ ಎಂದು ಹೇಳಿದರು. ಇಂತಹ ಅಂಗಡಿಯಲ್ಲೇ ಖರೀದಿ ಮಾಡಬೇಕು. ಇದೇ ಅಂಗಡಿಯಲ್ಲಿ ಮಾಂಸ ತೆಗೆದುಕೊಳ್ಳಬೇಕು ಎಂದು ಹೇಳುವ ಅಧಿಕಾರ ಯಾವುದೇ ಸಂಘ ಸಂಸ್ಥೆಗೆ ಇಲ್ಲ ಎಂದು ಹೇಳಿದರು. ಸಿ.ಟಿ ರವಿ ಹೇಳಿಕೆ ನೋಡಿದ್ದೇನೆ. ಇದರಲ್ಲಿ ತಪ್ಪು ಇಲ್ಲ ಎಂದು ಕಂದಾಯ ಸಚಿವ ಆರ್​ ಅಶೋಕ್​ ಸಮರ್ಥಿಸಿಕೊಂಡರು.

ಹಲಾಲ್ ಆರ್ಥಿಕ ಜಿಹಾದ್ ಎಂಬ ಸಿ.ಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಅಶೋಕ್, ಈ ರೀತಿಯ ಉತ್ಪ್ರೇಕ್ಷದ ಹೇಳಿಕೆ ತಪ್ಪು. ಯಾರೂ ಕೂಡ ಹಲಾಲ್ ಪರವಾಗಿ, ವಿರೋಧವಾಗಿ ಮಾತನಾಡಬಾರದು. ಬಹಳಷ್ಟು ಸ್ವಾಮೀಜಿಗಳು ಕೂಡ ಸಾಮರಸ್ಯದ ಬಗ್ಗೆ ‌ಮಾತನಾಡಿದ್ದಾರೆ. ಮುಸ್ಲಿಂ ಸಮುದಾಯ ಕೂಡ ಪೇಜಾವರ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ.‌ ಸಾಮರಸ್ಯ ಮುಖ್ಯ ಅಂತ ಹೇಳಿದ್ದಾರೆ. ಇದನ್ನು ಇಲ್ಲಿಗೆ ಕೈ ಬಿಡಬೇಕು. ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ನಾವು ಮೋದಿ ಪರವಾಗಿ ಇರುವವರು ಎಂದು ಸಚಿವರು ಸ್ಪಷ್ಟಪಡಿಸಿದರು.

ಓದಿ :ಕಬ್ಬಿಣದ ಮೊಳೆಗಳ ಮೇಲೆ ಬರಿಗಾಲಲ್ಲೇ ಕೂಚಿಪುಡಿ ನೃತ್ಯ​!​: ವಿಶ್ವದಾಖಲೆ ಬರೆದ ಉಪನ್ಯಾಸಕಿ

For All Latest Updates

TAGGED:

ABOUT THE AUTHOR

...view details