ಕರ್ನಾಟಕ

karnataka

ETV Bharat / city

ಸಮ್ಮಿಶ್ರ ಸರ್ಕಾರದಲ್ಲಿ ಸ್ವಾತಂತ್ರ್ಯ ಇರಲಿಲ್ಲ ಎಂದರೆ ಯಾಕೆ ಗವರ್ನಮೆಂಟ್​​ ಮಾಡಬೇಕಿತ್ತು: ಅಶೋಕ್ - BBMP elelction

ಬೆಂಗಳೂರಿನಲ್ಲಿ ಭಾರೀ ಮಳೆಗೆ ಉಂಟಾದ ಅವಾಂತರದ ಸಂಬಂಧ ಪ್ರತಿಕ್ರಿಯಿಸಿದ್ದ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕಂದಾಯ ಸಚಿವ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ. ಅವರ ಸರಕಾರ ಇರುವಾಗ ಏನೂ ಮಾಡಿಲ್ಲ.ಇದೀಗ ನಮ್ಮ ಸರಕಾರ ಈ ಸಮಸ್ಯೆಗಳನ್ನು ಬಗೆಹರಿಸುತ್ತಿದೆ ಎಂದು ಹೇಳಿದ್ದಾರೆ.

r-ashok-statement-against-hdk
ಸಮ್ಮಿಶ್ರ ಸರ್ಕಾರದಲ್ಲಿ ಸ್ವಾತಂತ್ರ್ಯ ಇರಲಿಲ್ಲ ಎಂದರೆ ಯಾಕೆ ಸರ್ಕಾರ ಮಾಡಬೇಕಿತ್ತು: ಸಚಿವ ಆರ್.ಅಶೋಕ್

By

Published : May 21, 2022, 5:21 PM IST

Updated : May 21, 2022, 5:37 PM IST

ಬೆಂಗಳೂರು: ನಗರದಲ್ಲಿ ಉಂಟಾಗಿರುವ ಮಳೆಯ ಅವಾಂತರದ ಬಗ್ಗೆ ಮಾತನಾಡುವ ಇವರು, ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ ಏನು ಮಾಡಿದ್ದರು?. ಸಮ್ಮಿಶ್ರ ಸರ್ಕಾರದಲ್ಲಿ ಸ್ವಾತಂತ್ರ್ಯ ಇರಲಿಲ್ಲ ಎಂದರೆ ಯಾಕೆ ಸರ್ಕಾರ ಮಾಡಬೇಕಿತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಜೆ.ಪಿ.ನಗರದಲ್ಲಿ ನಡೆದ ಬಿಜೆಪಿ ಸಭೆಯ ಬಳಿಕ ಮಾತನಾಡಿದ ಅವರು, ಅವರ ಅವಧಿಯಲ್ಲಿ ಬೆಂಗಳೂರಿಗೆ ಏನೂ‌ ಮಾಡಿಲ್ಲ. ಸುಮಾರು ಮೂವತ್ತು ನಲವತ್ತು ವರ್ಷಗಳಿಂದಲೂ ಈ ಸಮಸ್ಯೆ ಇದೆ. ಅವರಿದ್ದಾಗ ಏನೂ ಪರಿಹಾರ ಮಾಡಲಿಲ್ಲ. ಈಗ ನಮ್ಮ ಸರಕಾರ ಈ ಸಮಸ್ಯೆಗಳನ್ನು ಪರಿಹರಿಸುತ್ತಿರುವುದಾಗಿ ಆರ್ ಅಶೋಕ್ ಹೇಳಿದರು. ಸಿಎಂ ದೆಹಲಿ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯಸಭೆ, ಪರಿಷತ್ ಚುನಾವಣೆ ಬಗ್ಗೆ ಚರ್ಚೆಗೆ ದೆಹಲಿಗೆ ಹೋಗಿರಬಹುದೆಂಬುದು ನನ್ನ ಭಾವನೆ. ಅಮಿತ್ ಶಾ ಅವರನ್ನು ಭೇಟಿಯಾದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಬಿಬಿಎಂಪಿ ಚುನಾವಣೆ ಮಾಡೇ ಮಾಡುತ್ತೇವೆ: ಬಿಬಿಎಂಪಿ ಚುನಾವಣೆ ಮಾಡೇ ಮಾಡುತ್ತೇವೆ. ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸೋದಿಲ್ಲ. ನಮ್ಮ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಬೊಮ್ಮಾಯಿ ಮತ್ತು ಕಟೀಲ್ ನೇತೃತ್ವದಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ ಎಂದು ಹೇಳಿದರು.

ಓದಿ :ಸಿಎನ್​​ಜಿ ದರದಲ್ಲಿ ಮತ್ತೆ 2 ರೂ ಹೆಚ್ಚಳ: 2 ತಿಂಗಳಲ್ಲಿ 19 ರೂ ಏರಿಕೆ!

Last Updated : May 21, 2022, 5:37 PM IST

ABOUT THE AUTHOR

...view details