ಬೆಂಗಳೂರು:ಜಾಗತಿಕ ಉತ್ಪನ್ನ ಇಂಜಿನಿಯರಿಂಗ್ ಮತ್ತು ಜೀವನಚಕ್ರ ಸೇವೆಗಳ ಸಂಸ್ಥೆಯಾದ ಕ್ವೆಸ್ಟ್ ಗ್ಲೋಬಲ್, ಬೆಂಗಳೂರು ನಗರ ಪೊಲೀಸರಿಗೆ ವೈಯಕ್ತಿಕ ನೈರ್ಮಲ್ಯ ಕಿಟ್‌ಗಳನ್ನು ವಿತರಿಸಿದೆ.
ಕಂಪನಿಯು ನಗರ ಪೊಲೀಸರಿಗೆ ಸ್ಯಾನಿಟೈಸರ್‌ಗಳು, ಥರ್ಮಾಮೀಟರ್ ಗನ್‌ಗಳು, ಮಾಸ್ಕ್ಗಳು, ರೈನ್ ಜಾಕೆಟ್‌ಗಳು, ಛತ್ರಿಗಳನ್ನು ಒದಗಿಸಿದ್ದು, ಇದನ್ನು ನಗರದಾದ್ಯಂತ ಪೊಲೀಸ್ ಅಧಿಕಾರಿಗಳು ಬಳಸಲಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಂತೂ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮುಂಚೂಣಿ ಯೋಧರಿಗೆ ಕಂಪನಿಯು ಒದಗಿಸುತ್ತಿರುವ ಎರಡನೇ ಹಂತದ ಬೆಂಬಲ ಇದಾಗಿದೆ.
ಮೇ ತಿಂಗಳ ಆರಂಭದಲ್ಲಿ ನಗರದ 300ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳಿಗೆ ಕೋವಿಡ್-19 ಪರೀಕ್ಷೆಗಳನ್ನು ಮಾಡಿಸಲು ಕ್ವೆಸ್ಟ್ ಬೆಂಗಳೂರು ನಗರ ಪೊಲೀಸರ ಜೊತೆಗೂಡಿ ಕೆಲಸ ಮಾಡಿತ್ತು. ಮುಂಚೂಣಿ ಯೋಧರಿಗೆ ವೈಟ್ ಫೀಲ್ಡ್ನಲ್ಲಿರುವ ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್ನಲ್ಲಿ ರಿಯಲ್- ಟೈಮ್ ಪಿಸಿಆರ್ ಪರೀಕ್ಷೆಯನ್ನು ನಡೆಸಲಾಯಿತು.
ಸಿಟಿ ಪೊಲೀಸರಿಗೆ ಎರಡನೇ ಹಂತದ ಬೆಂಬಲದ ಕುರಿತು ಪ್ರತಿಕ್ರಿಯಿಸಿದ ಕ್ವೆಸ್ಟ್ ಗ್ಲೋಬಲ್ ಟೆಕ್ನಾಲಜಿ ಸರ್ವೀಸಸ್ ಅಧ್ಯಕ್ಷ ಅಜಯ್ ಪ್ರಭು ಅವರು ಮಾತನಾಡಿ, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಯುವ ಸಿಬ್ಬಂದಿ ಕೋವಿಡ್- 19 ಹರಡುವಿಕೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸರ್ಕಾರದ ಆದೇಶದನ್ವಯ ಮಹತ್ತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಮುಂಚೂಣಿ ಯೋಧರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತವರ ಆರೋಗ್ಯ ಮತ್ತು ಯೋಗ ಕ್ಷೇಮವನ್ನು ನೋಡಿಕೊಳ್ಳಬೇಕಿದೆ. ಈ ಕಾರ್ಯಕ್ರಮದ ಮೂಲಕ, ಕಾನೂನು ಸುವ್ಯವಸ್ಥೆ ಕಾಪಾಡುವಾಗ ಸರಪಳಿ ಮುರಿಯಲು ನಿಸ್ವಾರ್ಥ ಕರ್ತವ್ಯ ಪ್ರಜ್ಞೆಯೊಂದಿಗೆ ಧೈರ್ಯದಿಂದ ಹೋರಾಡುತ್ತಿರುವ ಮತ್ತು ನಮ್ಮನ್ನು ಕಾಪಾಡುತ್ತಿರುವ ಯೋಧರನ್ನು ಬೆಂಬಲಿಸಲು ಮತ್ತು ಗೌರವಿಸಲು ನಾವು ಬಯಸುತ್ತೇವೆ ಎಂದು ತಿಳಿಸಿದರು.
ಈ ಕುರಿತು ಮಾತನಾಡಿದ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್ ಪವನ್, ಪೊಲೀಸ್ ಪಡೆ ಮತ್ತು ಆರೋಗ್ಯ ಕಾರ್ಯಕರ್ತರು ದೇಶಾದ್ಯಂತ ಕೋವಿಡ್-19 ಹರಡುವುದನ್ನು ತಡೆಯಲು ಪ್ರಯತ್ನಿಸುತ್ತಿರುವ ಸಮಯವಿದು. ಅವರ ಉದಾರ ಸಹಾಯ ಪಡೆಯಲು ನಾವು ಕ್ವೆಸ್ಟ್‌ಗೆ ಕೃತಜ್ಞರಾಗಿರುತ್ತೇವೆ. ಕ್ವೆಸ್ಟ್ ಮುಂಚೂಣಿ ಕಾರ್ಮಿಕರು ಮತ್ತು ಪೊಲೀಸರ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿರುವುದು ಹೃದಯಸ್ಪರ್ಶಿಯಾಗಿದೆ. ಈ ಬೆಂಬಲವು ಪೊಲೀಸ್ ಪಡೆಯಲ್ಲಿ ಗಮನಾರ್ಹ ಮತ್ತು ಸಕಾರಾತ್ಮಕ ಬದಲಾವಣೆಯನ್ನು ತಂದಿದೆ. ಮತ್ತೊಮ್ಮೆ ಇಡೀ ನಗರ ಪೊಲೀಸ್ ಪಡೆಯ ಪರವಾಗಿ, ನಮ್ಮ ಸಮುದಾಯದ ಮುಂದುವರಿದ ಯೋಗಕ್ಷೇಮಕ್ಕೆ ಸಹಕರಿಸಿದ್ದಕ್ಕಾಗಿ ಧನ್ಯವಾದಗಳು ತಿಳಿಸುತ್ತೇನೆ ಎಂದರು.