ಕರ್ನಾಟಕ

karnataka

ETV Bharat / city

ಬೀದಿ ಜಗಳ ಕೊಲೆಯಲ್ಲಿ ಅಂತ್ಯ: ಚೂರಿಯಿಂದ ಎದೆಗೆ ಇರಿತ - ಜಗಳ ಓರ್ವನ ಸಾವು

ಮೀನು ಖರೀದಿಸುವ ವಿಚಾರಕ್ಕೆ ಶುರುವಾದ ಜಗಳ ಮಾತಿಗೆ ಮಾತು ಬೆಳೆದು ಒಬ್ಬನ ಕೊಲೆಗೆ ಕಾರಣವಾಗಿದೆ. ಕೊಲೆ ಆರೋಪಿ ಅರ್ಜುನ್​, ಪ್ರಶಾಂತ್​ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ.

Prashanth
ಮೃತ ದುರ್ದೈವಿ ಪ್ರಶಾಂತ್​

By

Published : Jun 6, 2022, 10:42 AM IST

Updated : Jun 6, 2022, 12:52 PM IST

ಬೆಂಗಳೂರು :ಮದ್ಯದ ಅಮಲಿನಲ್ಲಿ ನೆರೆ ಹೊರೆಯವರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಪುಲಕೇಶಿನಗರದ ಕೆಎಚ್‌ಬಿ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ. ಪ್ರಶಾಂತ್ (24) ಕೊಲೆಯಾದ ದುರ್ದೈವಿಯಾಗಿದ್ದು, ಆತನ ನೆರೆ ಮನೆ ನಿವಾಸಿ ಅರ್ಜುನ್ (26) ಕೃತ್ಯ ಎಸಗಿರುವ ಆರೋಪಿ.

ಭಾನುವಾರ ಸಂಜೆ ಮದ್ಯಪಾನ ಮಾಡಿಕೊಂಡು ಬಂದಿದ್ದ ಪ್ರಶಾಂತ್ ಸುಖಾಸುಮ್ಮನೆ ಮೀನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಬೆದರಿಸುತ್ತಿದ್ದನು. ಅದೇ ಸಮಯದಲ್ಲಿ ಮೀನು ಖರೀದಿಸಲು ಬಂದಿದ್ದ ಆರೋಪಿ ಅರ್ಜುನ್ ‘ನಾನು ಮೀನು ಖರೀದಿಸಲು ಬರುವಾಗ, ಮೀನು ಮಾರಾಟ ಮಾಡುವವನಿಗೆ ಬೆದರಿಸುತ್ತೀಯಾ?’ ಎಂದು ಜಗಳ ತೆಗೆದಿದ್ದಾನೆ.

ಬೀದಿ ಜಗಳ ಕೊಲೆಯಲ್ಲಿ ಅಂತ್ಯ: ಚೂರಿಯಿಂದ ಎದೆಗೆ ಇರಿತ

ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು, ಒಬ್ಬರಿಗೊಬ್ಬರು ನಿಂದಿಸಿದ್ದರು. ಆಕ್ರೋಶಗೊಂಡ ಅರ್ಜುನ್ ಮನೆಯಲ್ಲಿದ್ದ ಚಾಕುವಿನಿಂದ ಪ್ರಶಾಂತ್ ಎದೆಯ ಭಾಗಕ್ಕೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದಾಗಿ ಪ್ರಶಾಂತ್ ಮೃತಪಟ್ಟಿದ್ದಾನೆ. ಪ್ರಶಾಂತ್ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪುಲಕೇಶಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಇದನ್ನೂ ಓದಿ:ನಂಬಿಸಿ ಕರೆದೊಯ್ದು ಕತ್ತು ಸೀಳಿ 9ರ ಬಾಲೆಯ ಕೊಲೆ: 17 ವರ್ಷದ ಬಾಲಕನ ಸೆರೆ

Last Updated : Jun 6, 2022, 12:52 PM IST

ABOUT THE AUTHOR

...view details