ಬೆಂಗಳೂರು :ಕನ್ನಡ ಚಿತ್ರರಂಗದ ಕಣ್ಮಣಿ, ಅಭಿಮಾನಗಳ ರಾಜಕುಮಾರ ನಟ ಪುನೀತ್ ರಾಜ್‍ಕುಮಾರ್ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಭೂತಾಯಿಯ ಮಡಿಲಲ್ಲಿ ಚಿರ ನಿದ್ರೆಗೆ ಜಾರಿದರು.
ಪುನೀತ್ ಅಂತ್ಯಕ್ರಿಯೆ ಬಳಿಕ ಸಾಧು ಕೋಕಿಲ ಮಾತು ಅಪ್ಪು ಜೊತೆ ಹಲವಾರು ಸಿನಿಮಾಗಳಲ್ಲಿ ಹಾಸ್ಯನಟ, ನಿರ್ದೇಶಕ ಸಾಧು ಕೋಕಿಲ ನಟಿಸಿದ್ದಾರೆ. ಇಂದು ಪುನೀತ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಸಾಧು ಕೋಕಿಲ, ಅಂತ್ಯಕ್ರಿಯೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕನ್ನಡ ಚಿತ್ರರಂಗದ ದೊಡ್ಡ ಕೊಂಡಿ ಕಳಚಿಕೊಂಡಿದೆ. ಪುನೀತ್ ಅವ್ರನ್ನ ಕಳೆದುಕೊಂಡಿರುವ ಅವರ ಮನೆಯವರು ಹಾಗೂ ಮಕ್ಕಳಿಗೆ ಆ ದೇವರು ನೋವನ್ನ ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ಬೇಡಿಕೊಂಡರು.
ಇದನ್ನೂ ಓದಿ:'ಎಲ್ಲಾ ಮುಗಿದು ಹೋಯಿತು'.. ಗೆಳೆಯನಿಗೆ ಭಾವನಾತ್ಮಕ ವಿದಾಯ ಪತ್ರ ಬರೆದ ಕಿಚ್ಚ
ಅಪ್ಪು ಅವರ ಮೈಮುಟ್ಟಿದ್ರೆನೆ ಮೈ ಜುಮ್ ಎನ್ನಿಸುತ್ತಿತ್ತು. ಅಂತಹ ಪುನೀತ್ ರಾಜ್‍ಕುಮಾರ್ ನಮ್ಮೊಂದಿಗಿಲ್ಲ ಅಂತಾ ನಾನು ಹೇಳೋದೇ ಇಲ್ಲ. ಪುನೀತ್ ಸಾರ್ ಎಲ್ಲೂ ಹೋಗಿಲ್ಲ ನಮ್ಮ ಜೊತೆಲೇ ಇದ್ದಾರೆ ಎಂದು ಹೇಳಿದರು.