ಬೆಂಗಳೂರು:ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ನಟ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕುರ ಎಂದು ಆಸ್ಪತ್ರೆಗೆ ಬಂದಿದ್ದ ಬಾಲಕಿ ಭೂಮಿಕಾಗೆ ಓವರ್ಡೋಸ್ ಮೆಡಿಸನ್ ನೀಡಿದ ಕಾರಣಕ್ಕಾಗಿ ಕಿಡ್ನಿ ಕಳೆದುಕೊಂಡಳು. ಆ ನಂತರ ಉಸಿರಾಟದ ಸಮಸ್ಯೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಭೂಮಿಕಾ ಪರಿಸ್ಥಿತಿ ಗಂಭೀರವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಆ ನಂತರ ಬಾಲಕಿ ಕೋಮಾಗೆ ಹೋಗಿದ್ದಳು ಎಂದು ಆರೋಪಿಸಲಾಗಿದೆ.
ವೈದ್ಯರ ನಿರ್ಲಕ್ಷ್ಯದಿಂದ ಮಗಳು ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ ಆಸ್ಪತ್ರೆ ವಿರುದ್ಧ ಭೂಮಿಕಾ ತಂದೆ ಮೆಡಿಕಲ್ ಬೋರ್ಡ್ಗೆ ದೂರು ನೀಡಿದ್ದರು. ಬೋರ್ಡ್ನಲ್ಲಿ ಪ್ರಕರಣ ಇತ್ಯರ್ಥವಾಗುವುದಕ್ಕೂ ಮೊದಲೇ ಬಾಲಕಿ ಸಾವನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಘಟನೆ ಸಾವನ್ನ ಖಂಡಿಸಿ ಪೋಷಕರು ರಾಜರಾಜೇಶ್ವರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದರು.
ಭೂಮಿಕಾ, ನಟ ಪುನೀತ್ ರಾಜಕುಮಾರ್ ಅಭಿಮಾನಿಯಾಗಿದ್ದಳು. ಕೋಮಾಗೆ ಹೋಗುವ ಮುನ್ನ ಭೂಮಿಕಾ ತನ್ನ ತಂದೆಗೆ ಪತ್ರ ಬರೆದು ನಟ ಪುನೀತ್ ರಾಜ್‍ಕುಮಾರ್ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.