ಬೆಂಗಳೂರು: ಜೀವನದುದ್ದಕ್ಕೂ ಸಮಾಜ ಸೇವೆ ಜತೆಗೆ ಅದ್ಭುತ ನಟನೆಯ ಮೂಲಕ ಎಲ್ಲರ ಮನ ಗೆದ್ದಿದ್ದ ಕರುನಾಡಿನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮಣ್ಣಾಗುವ ಮೊದಲೇ ಇಬ್ಬರ ಬಾಳಿಗೆ ಬೆಳಕಿಗಾಗಿದ್ದಾರೆ.
ಹೃದಯಘಾತದಿಂದ ಶುಕ್ರವಾರ ವಿಕ್ರಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಕೂಡಲೇ ಆ ನೋವಿನಲ್ಲಿಯೂ ಕುಟುಂಬ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಂದೆಗೆ ತಕ್ಕ ಮಗನಾಗಿರುವ ಅಪ್ಪು, ತಂದೆ ತೋರಿದ ದಾರಿಯಲ್ಲೇ ತಮ್ಮ ಎರಡು ಕಣ್ಣುಗಳನ್ನ ದಾನ ಮಾಡಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ ಪುನೀತ್ ರಾಜ್ಕುಮಾರ್ ಅವರ ಕಣ್ಣುಗಳನ್ನು ನಿನ್ನೆ (ಶನಿವಾರ) ಒಬ್ಬರಿಗೆ ಹಾಗು ಇಂದು ಇನ್ನೊಬ್ಬರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಮೂಲಕ ಕತ್ತಲೆಯಲ್ಲಿದ್ದ ಇಬ್ಬರ ಬಾಳಲ್ಲಿ ಬೆಳಕಾಗಿದ್ದಾರೆ. ನಾರಾಯಣ ನೇತ್ರಾಲಯದ ವೈದ್ಯರು ಶಸ್ತ್ರಚಿಕಿತ್ಸೆ ಸಂಬಂಧ ಮಾಧ್ಯಮಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸ್ಟಾರ್... ಅಪ್ಪನ ಹಾದಿ ಹಿಡಿದ ಅಪ್ಪು..