ಬೆಂಗಳೂರು: ಹೃದಯಘಾತದಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ, ತಂದೆಯ ಸಾವಿನ ಸುದ್ದಿ ತಿಳಿದು ಅಮೆರಿಕದಿಂದ ಮಗಳು ಧೃತಿ ಬೆಂಗಳೂರು ಕಡೆ ಪಯಣ ಬೆಳೆಸಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನ: ತಂದೆ ನೋಡಲು ಅಮೆರಿಕದಿಂದ ಧೃತಿ ಪಯಣ - ನಟ ಪುನೀತ್ ರಾಜಕುಮಾರ್ ನಿಧನದ ಸುದ್ದಿ
ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ ತಂದೆಯ ಸಾವಿನ ಸುದ್ದಿ ತಿಳಿದು ನ್ಯೂಯಾರ್ಕ್ನಿಂದ ಧೃತಿ ಬೆಂಗಳೂರು ಕಡೆ ಪಯಣ ಬೆಳೆಸಿದ್ದಾರೆ. ನಾಳೆ ಸಾಯಂಕಾಲ 4 ಗಂಟೆ ವೇಳೆಗೆ ಅವರು ಬೆಂಗಳೂರು ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ.
ಧೃತಿ ರಾಜ್ ಕುಮಾರ್
ವಿಶೇಷ ವಿಮಾನದ ಮೂಲಕ ಆಗಮಿಸುತ್ತಿರುವ ನಟ ಪುನೀತ್ ರಾಜ್ಕುಮಾರ್ ಪುತ್ರಿ, ನಾಳೆ ಸಾಯಂಕಾಲ 4 ಗಂಟೆ ವೇಳೆಗೆ ಬೆಂಗಳೂರು ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಧೃತಿ ನಾಲ್ಕು ಗಂಟೆಯ ವೇಳೆ ಸರಿಯಾಗಿ ಬಂದರೆ ನಾಳೆಯೇ ಪುನೀತ್ ಅವರ ಅಂತ್ಯಕ್ರಿಯೆ ಮಾಡುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.