ಕರ್ನಾಟಕ

karnataka

ETV Bharat / city

ಫಿಲ್ಮ್​​ ಚೇಂಬರ್​​ 'ಪುನೀತ್ ನಮನ' ವಿಶೇಷ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧ..!

ನಟಸಾರ್ವಭೌಮ ಪುನೀತ್​ ರಾಜಕುಮಾರ್​ ನಿಧನ ಹಿನ್ನೆಲೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ 'ಪುನೀತ್ ನಮನ' (Puneeth Namana event) ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ನವೆಂಬರ್ 16ಕ್ಕೆ ಈ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಇದೆ. ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಸಿನಿಮಾರಂಗದ ತಾರೆಯರು ಹಾಗೂ ಸಿಎಂ ಬೊಮ್ಮಾಯಿ ಸೇರಿದಂತೆ ರಾಜಕೀಯ ಗಣ್ಯವ್ಯಕ್ತಿಗಳು ಭಾಗಿಯಾಗಲಿದ್ದಾರೆ..

puneeth-namana-film-chamber-special-event
ಪುನೀತ್ ನಮನ

By

Published : Nov 12, 2021, 7:35 PM IST

ಬೆಂಗಳೂರು :ನಟ ಪುನೀತ್ ರಾಜಕುಮಾರ್ (Puneeth Rajkumar) ಅಗಲಿಕೆ ಹಿನ್ನೆಲೆ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ 'ಪುನೀತ್ ನಮನ' ಕಾರ್ಯಕ್ರಮ (Puneeth Namana event) ಆಯೋಜಿಸಲಾಗಿದೆ. ಇದೇ ನವೆಂಬರ್ 16ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಗಾಯಿತ್ರಿ ವಿಹಾರ್​ದಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಫಿಲ್ಮ್ ಚೇಂಬರ್ ತಿಳಿಸಿದೆ.

ಫಿಲ್ಮ್​​ ಚೇಂಬರ್​​ 'ಪುನೀತ್ ನಮನ' ವಿಶೇಷ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧ..

ಪುನೀತ್​ ನಮನ ಕಾರ್ಯಕ್ರಮದ ರೂಪುರೇಷೆ ಬಗ್ಗೆ ರಾಜ್ಯ ಫಿಲ್ಮ್ ಚೇಂಬರ್ (Karnataka Film Chamber Of Commerce) ವತಿಯಿಂದ ಸುದ್ದಿಗೋಷ್ಠಿ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಗೌರವ ಕಾರ್ಯದರ್ಶಿ ಎನ್. ಎಂ. ಸುರೇಶ್, ನಿರ್ದೇಶಕ ನಾಗಣ್ಣ, ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ ರಾ ಗೋವಿಂದ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, 'ಪುನೀತ್ ನಮನ' ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ ರಾ ಗೋವಿಂದ್ ಮಾತನಾಡಿ, ಪುನೀತ್ ನಮನ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಸಿನಿಮಾರಂಗದ ತಾರೆಯರು ಭಾಗಿಯಾಗಲಿದ್ದಾರೆ. ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವರು ಹಾಗೂ ವಿರೋಧ ಪಕ್ಷದ ನಾಯಕರು ಸೇರಿದಂತೆ ಬರೋಬ್ಬರಿ 1500 ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಅವಕಾಶ ಇಲ್ಲ :ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಅವಕಾಶ ಇಲ್ಲ. ಯಾವುದೇ ಮನರಂಜನೆ ಕಾರ್ಯಕ್ರಮಕ್ಕೂ ಅವಕಾಶ ಇರುವುದಿಲ್ಲ. ಅಂದು ಚಿತ್ರಪ್ರದರ್ಶನ, ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತ ಮಾಡಲಾಗಿದೆ.

ಸಾಹಿತಿ ನಾಗೇಂದ್ರ ಪ್ರಸಾದ್ ಅವರ ವಿಶೇಷ ಗೀತೆ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ‌. ಹಾಗೇ ಪುನೀತ್ ನಡೆದು ಬಂದ ದಾರಿ ಬಗ್ಗೆ ಒಂದು ಸಣ್ಣ ಸಾಕ್ಷ್ಯಚಿತ್ರ ಪ್ರಸಾರ ಮಾಡಲಾಗುತ್ತೆ. ಗಾಯಕ ವಿಜಯ್ ಪ್ರಕಾಶ್ ಹಾಗೂ ಗುರು ಕಿರಣ್ ಪುನೀತ್ ಸಿನಿಮಾಗಳ ಗಾನಸುಧೆ ಇರುತ್ತೆ ಅಂತಾ ಸಾ ರಾ ಗೋವಿಂದ್ ಹೇಳಿದರು.

ವಿಶೇಷ ಪಾಸ್​ ವ್ಯವಸ್ಥೆ : ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ನಿರ್ದೇಶಕ ನವರಸನ್ ಹೇಳುವ ಹಾಗೇ, ಪುನೀತ್ ನಮನ ಕಾರ್ಯಕ್ರಮ 3 ಗಂಟೆಗೆ ಶುರುವಾಗಿ, ಸತತ ಮೂರು ಗಂಟೆಗಳ ಕಾಲ ನಡೆಯಲಿದೆ. ಈ ಕಾರ್ಯಕ್ರಮ ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿದೆ.

ಹೀಗಾಗಿ, ಎರಡು ರೀತಿಯ ಪಾಸ್ ವ್ಯವಸ್ಥೆ ಮಾಡಲಾಗಿದೆ. ಕಲಾವಿದರಿಗೆ ಹಾಗೂ ಗಣ್ಯರಿಗೆ ಬೇರೆ ಬೇರೆ ಪಾಸ್​ಗಳ ವ್ಯವಸ್ಥೆ ಇದೆ. ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ಈ ಎಲ್ಲಾ ಸಿದ್ದತೆ ಮಾಡಲಾಗಿದೆ. ಕಾರ್ಯಕ್ರಮದ ಎಲ್ಲಾ ವೆಚ್ಚವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಭರಿಸಲಿದೆ ಎಂದು ತಿಳಿಸಿದರು.

ABOUT THE AUTHOR

...view details