ಕರ್ನಾಟಕ

karnataka

ETV Bharat / city

ತಲೆಗೆ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ: ಆತ್ಮಹತ್ಯೆಯೋ, ಕೊಲೆಯೋ ಎನ್ನುವ ಶಂಕೆ? - ರಾಹುಲ್​ ಭಂಡಾರಿ ಆತ್ಮಹತ್ಯೆ

ಸಂಜಯನಗರ ಬಸ್​ಸ್ಟಾಪ್​ ಬಳಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ.

puc student dead body found at bangalore
ಬೆಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿ ಶವ ಪತ್ತೆ

By

Published : Sep 17, 2021, 8:48 AM IST

Updated : Sep 17, 2021, 9:12 AM IST

ಬೆಂಗಳೂರು: ಸಂಜಯ ನಗರದ ನಂದಿನಿ ಬೂತ್ ಬಳಿ ಪಾದಚಾರಿ ಮಾರ್ಗದಲ್ಲಿ ಪಿಸ್ತೂಲ್​ನಿಂದ ಶೂಟ್ ಮಾಡಿಕೊಂಡಿರುವ ಸ್ಥಿತಿಯಲ್ಲಿ ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಶಂಕೆ ಮೂಡಿದ್ದು, ಸದಾಶಿವ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ‌.

ತಲೆಗೆ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ

ಆರ್.ಟಿ. ನಗರ ಗಂಗಾ ಬೇಕರಿ ಬಳಿಯ ನಿವಾಸಿ 17 ವರ್ಷದ ರಾಹುಲ್ ಭಂಡಾರಿ ಸಾವನ್ನಪ್ಪಿದ್ದ ಪಿಯುಸಿ ವಿದ್ಯಾರ್ಥಿ. ಮಿಲಿಟರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ‌ ಮಾಡುತ್ತಿದ್ದ ರಾಹುಲ್ ಪ್ರತಿ ದಿನ 3 ಗಂಟೆಗೆ ಎದ್ದು ಓದುತ್ತಿದ್ದ. ಇದರಂತೆ ಇಂದು ಬೆಳಗ್ಗೆ ಎದ್ದು ಕೆಲ ಹೊತ್ತು ಓದಿದ ಬಳಿಕ ಮನೆಯಿಂದ 4 ಗಂಟೆ ವೇಳೆ ವಾಕಿಂಗ್ ಮಾಡಲು ಹೊರ ಬಂದಿದ್ದಾನೆ.‌

ಸುಮಾರು 5 ಗಂಟೆಯ ವೇಳೆ ತಲೆಯ ಎಡಭಾಗಕ್ಕೆ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ಯುವಕನೇ ಶೂಟ್ ಮಾಡಿಕೊಂಡಿದ್ದಾನಾ? ಅಥವಾ ಬೇರೆ ಯಾರಾದರೂ ಶೂಟ್ ಮಾಡಿದ್ದಾರಾ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಮಾನಸಿಕ‌ ಒತ್ತಡಕ್ಕೆ ಒಳಗಾಗಿರುವ ಶಂಕೆ:

ರಾಹುಲ್ ಭಂಡಾರಿ ಭಗತ್ ಸಿಂಗ್ -ಬಾಬ್ನಾ ದಂಪತಿಯ ಪುತ್ರ. ಭಗತ್ ಸಿಂಗ್ ಉತ್ತರಾಖಂಡ ಮೂಲದವರು. ಬೆಂಗಳೂರಿಗೆ ಬಂದು 20 ವರ್ಷವಾಗಿತ್ತು. ಭಗತ್ ಸಿಂಗ್ ನಿವೃತ್ತ ಆರ್ಮಿ ಮ್ಯಾನ್ ಆಗಿದ್ದಾರೆ. ಆರ್.ಟಿ. ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದರು. 10 ನೇ ತರಗತಿಯಲ್ಲಿ ಶೇ.90ರಷ್ಟು ಅಂಕ‌ ಪಡೆದಿದ್ದ. ಮನೆಯಲ್ಲಿಯೂ ಓದಬೇಕು ಎನ್ನುವ ಒತ್ತಡ ಇರಲಿಲ್ಲ. ಆದರೂ ಮಾನಸಿಕ‌ ಒತ್ತಡಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ‌‌.

ಮೃತ ಯುವಕನ ತಾಯಿ‌‌ ಪ್ರತಿಕ್ರಿಯೆ:

ಘಟನೆ ಬಳಿಕ ಮೃತ ಯುವಕನ ತಾಯಿ‌‌ ಪ್ರತಿಕ್ರಿಯಿಸಿದ್ದು, ಪ್ರತಿ ದಿನ ರಾತ್ರಿ ಮತ್ತು ಮುಂಜಾನೆ ಹೊತ್ತಿನಲ್ಲಿ ಓದುತ್ತಿದ್ದ. ಮಾನಸಿಕ ಒತ್ತಡ ಜಾಸ್ತಿಯಾದಾಗ ಹೊರಗಡೆ ವಾಕಿಂಗ್ ಮಾಡುತ್ತಿದ್ದ. ಇಂದು ಕೂಡ 4 ಗಂಟೆ ಸುಮಾರಿಗೆ ಹೊರಗಡೆ ಬಂದಿದ್ದ. ಬೆಳ್ಳಗೆ 5 ಗಂಟೆಯಿಂದ ಸತತವಾಗಿ ಕರೆ ಮಾಡಿದರೂ‌‌‌ ಫೋನ್ ರಿಸೀವ್ ಮಾಡಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಪೆಟ್ರೋಲಿಯಂ ಉತ್ಪನ್ನ ಅಕ್ರಮ ದಾಸ್ತಾನು.. 12.5 ಲಕ್ಷ ರೂ ಮೌಲ್ಯದ ಸ್ವತ್ತು ಜಪ್ತಿ

ಇನ್ನು ರಾತ್ರಿ ಊಟ ಮುಗಿಸಿ ಮನೆಯಲ್ಲೇ ಮಲಗಿದ್ದ. ಇಂದು ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ. ನಾಲ್ಕು ಗಂಟೆಯಿಂದ ನಿರಂತರವಾಗಿ ಕರೆ ಮಾಡುತ್ತಿದ್ದರೂ ಕರೆ ಸ್ವೀಕರಿಸಲಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ‌ ಡಿಸಿಪಿ‌ ಅನುಚೇತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Sep 17, 2021, 9:12 AM IST

ABOUT THE AUTHOR

...view details