ಕರ್ನಾಟಕ

karnataka

ETV Bharat / city

ಸ್ವಾತಂತ್ರೋತ್ಸವ ವಿಶೇಷ: ರಾಜಭವನ ಭೇಟಿಗೆ ಸಾರ್ವಜನಿಕರಿಗೆ ಅವಕಾಶ - Independence Day

73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 17 ರಿಂದ 31ರವರೆಗೆ ಪ್ರತಿ ದಿನ 3.30 ರಿಂದ ಸಂಜೆ 7.30 ರವರೆಗೆ ರಾಜಭವನಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ.

ಸ್ವಾತಂತ್ರೋತ್ಸವದ ಅಂಗವಾಗಿ ರಾಜಭವನಕ್ಕೆ ಸಾರ್ವಜನಿಕರಿಗೆ ಪ್ರವೇಶ

By

Published : Aug 19, 2019, 3:34 AM IST


ಬೆಂಗಳೂರು:73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 17 ರಿಂದ 31ರವರೆಗೆ ಪ್ರತಿ ದಿನ 3.30 ರಿಂದ ಸಂಜೆ 7.30 ರವರೆಗೆ ರಾಜಭವನಕ್ಕೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ.

ಸ್ವಾತಂತ್ರೋತ್ಸವದ ಅಂಗವಾಗಿ ರಾಜಭವನಕ್ಕೆ ಸಾರ್ವಜನಿಕರಿಗೆ ಪ್ರವೇಶ

ಇನ್ನು ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದ ಹಿನ್ನೆಲೆ, ರಾಜ ಭವನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರಾಜಭವನಕ್ಕೆ ಭೇಟಿ ನೀಡಲು ಆನ್ಲೈನ್​ನಲ್ಲಿ ನೊಂದಾಯಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಯಾವುದಾದರೂ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋದರು ಸಹಜವಾದ ಭೇಟಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ ರಾಜ್ಯ ಭವನದ ಒಳಗಡೆ ಬ್ಯಾಂಕ್ವೆಟ್ ಹಾಲ್, ಗಾಜಿನ ಮನೆ ಹಾಗೂ ಗಾರ್ಡನ್​ಗಳನ್ನು ಗೈಡ್​​ಗಳ ಸಹಾಯದೊಂದಿಗೆ ವೀಕ್ಷಿಸಬಹುದಾಗಿದೆ.

ಇದರ ಜೊತೆಗೆ ರಾಜಭವನದ ಹೊರಗೆ ಭೇಟಿ ಕೊಡುವ ಸಾರ್ವಜನಿಕರಿಗೆ ಟೀ-ಕಾಫಿ ಹಾಗೂ ಬಿಸ್ಕೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ರಾಜಭವನಕ್ಕೆ ಭೇಟಿಗೆ ಬರುವ ಯಾರಿಗೂ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸಾರ್ವಜನಿಕರು ಅಪರೂಪಕ್ಕೆ ಸಿಕ್ಕಿರುವಂತಹ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ABOUT THE AUTHOR

...view details