ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇಂದೂ ಅಭ್ಯರ್ಥಿಗಳ ತನಿಖೆ ಮುಂದುವರೆಯಲಿದೆ. ಪ್ರಕರಣದಲ್ಲಿ 50 ಜನ ಅಭ್ಯರ್ಥಿಗಳಿಗೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚಿಸಿತ್ತು. ಆ ಪೈಕಿ ಮೂರ್ನಾಲ್ಕು ಅಭ್ಯರ್ಥಿಗಳು ಗೈರಾಗಿದ್ದಾರೆ. ಉಳಿದ ಅಭ್ಯರ್ಥಿಗಳ ವಿಚಾರಣೆ ನಡೆಸಲಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮ.. ಸಿಐಡಿಯಿಂದ ಮುಂದುವರಿದ ಅಭ್ಯರ್ಥಿಗಳ ವಿಚಾರಣೆ - PSI recruitment scandal
ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇಂದೂ ಸಹ ಅಭ್ಯರ್ಥಿಗಳ ತನಿಖೆ ಮುಂದುವರೆಯಲಿದೆ. ಪ್ರಕರಣದಲ್ಲಿ 50 ಜನ ಅಭ್ಯರ್ಥಿಗಳಿಗೆ ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚಿಸಿತ್ತು. ಆ ಪೈಕಿ ಮೂರ್ನಾಲ್ಕು ಅಭ್ಯರ್ಥಿಗಳು ಗೈರಾಗಿದ್ದಾರೆ. ಉಳಿದ ಅಭ್ಯರ್ಥಿಗಳ ವಿಚಾರಣೆ ನಡೆಸಲಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮ : ಇಂದು ನಡೆಯಲಿರುವ ಅಭ್ಯರ್ಥಿಗಳ ವಿಚಾರಣೆ
ಇಂದೂ ಕೂಡ 50 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಆರ್ಪಿಸಿ ಕಲಂ 91ರ ಅಡಿ ನೊಟೀಸ್ ನೀಡಲಾಗಿದ್ದು, ಪ್ರತಿ ಅಭ್ಯರ್ಥಿಯ ಪ್ರವೇಶ ಪತ್ರ ಪರಿಶೀಲಿಸಿ ವಿಡಿಯೋ ಚಿತ್ರೀಕರಣದೊಂದಿಗೆ ವಿಚಾರಣೆ ನಡೆಯಲಿದೆ. 2020-21ನೇ ಸಾಲಿನಲ್ಲಿ ಉತ್ತೀರ್ಣರಾದ 545 ಅಭ್ಯರ್ಥಿಗಳನ್ನ ಹಂತ ಹಂತವಾಗಿ ಸಿಐಡಿ ವಿಚಾರಣೆ ನಡೆಸಲಿದ್ದು, ತನಿಖಾಧಿಕಾರಿ ನರಸಿಂಹ ಮೂರ್ತಿ ನೇತೃತ್ವದಲ್ಲಿ ವಿಚಾರಣೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಓದಿ :ಮೋದಿ ವಿರುದ್ಧ ಮೇವಾನಿ ಸರಣಿ ಟ್ವೀಟ್.. ಅಸ್ಸೋಂ ಪೊಲೀಸರಿಂದ ಗುಜರಾತ್ ಶಾಸಕ ಜಿಗ್ನೇಶ್ ಅರೆಸ್ಟ್
Last Updated : Apr 21, 2022, 10:34 AM IST