ಬೆಂಗಳೂರು:ಪಿಎಸ್ಐ ನೇಮಕಾತಿ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ ಮೂವರು ಆರೋಪಿಗಳನ್ನ ಸಿಐಡಿ ಕಸ್ಟಡಿಗೆ ಪಡೆದಿದೆ. ಡಿವೈಎಸ್ಪಿ ಶಾಂತಕುಮಾರ್, ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಹಾಗೂ ಶ್ರೀನಿವಾಸ ಅವರನ್ನ ಜೂ.29ರ ವರೆಗೆ ಸಿಐಡಿ ಕಸ್ಟಡಿಗೆ ಪಡೆದಿದ್ದು ವಿಚಾರಣೆ ಮುಂದುವರೆಸಿದೆ.
ಪಿಎಸ್ಐ ನೇಮಕ ಹಗರಣ: ಮೂವರು ಆರೋಪಿಗಳು ಸಿಐಡಿ ಕಸ್ಟಡಿಗೆ - ಡಿವೈಎಸ್ಪಿ ಶಾಂತಕುಮಾರ್ ಸಿಐಡಿ ಕಸ್ಟಡಿಗೆ
PSI recruitment scam: ಡಿವೈಎಸ್ಪಿ ಶಾಂತಕುಮಾರ್, ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಹಾಗೂ ಶ್ರೀನಿವಾಸ ಅವರನ್ನ ಜೂ.29ರ ವರೆಗೆ ಸಿಐಡಿ ಕಸ್ಟಡಿಗೆ ಪಡೆದಿದ್ದು, ವಿಚಾರಣೆ ಮುಂದುವರೆಸಿದೆ.

ಸಿಐಡಿ
ಯಲಹಂಕ ನ್ಯೂಟೌನ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಸಂಬಂಧ ಬಂಧಿತರನ್ನ ಪುನಃ ವಶಕ್ಕೆ ಪಡೆಯಲಾಗಿದೆ. ಸೋಮವಾರ ಮತ್ತೆ ಎಡಿಜಿಪಿ ಅಮೃತ್ ಪಾಲ್ ಅವರನ್ನ ವಿಚಾರಣೆಗೆ ಕರೆದು ಮುಖಾಮುಖಿ ಆರೋಪಿಗಳೆದುರು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದನ್ನೂ ಓದಿ:ಪಿಎಸ್ಐ ಪರೀಕ್ಷೆ ಅಕ್ರಮ: ನೇಮಕಾತಿ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿ ಬಂಧನ