ಬೆಂಗಳೂರು:ಪಿಎಸ್ಐ ಅಕ್ರಮ ನೇಮಕಾತಿಯ ತನಿಖೆ ಈಗಾಗಲೇ ಚುರುಕುಗೊಂಡಿದೆ. ಅಕ್ರಮದಲ್ಲಿ ತೊಡಗಿರುವ ಹಲವರ ಬಂಧನವಾಗಿದೆ. ಇನ್ನಷ್ಟು ಮಂದಿಯ ಬಂಧನವಾಗುವ ಸಾಧ್ಯತೆಗಳಿವೆ. ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ ಸುಮಾರು 172 ಮಂದಿಗಳ ಪೈಕಿ 22 ಅಭ್ಯರ್ಥಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. 12 ಅಭ್ಯರ್ಥಿಗಳ ಬಂಧನದ ಜೊತೆಗೆ 10 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚಿಸಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಪ್ರತಿಭಟನೆ ಕೈಬಿಟ್ಟ ಅಭ್ಯರ್ಥಿಗಳು - PSI recruitment protetst at freedom park
ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದ ಪಿಎಸ್ಐ ಅಭ್ಯರ್ಥಿಗಳು ನೇಮಕಾತಿಯಾಗಿ ಒತ್ತಾಯಿಸಿ ಫ್ರೀಡಂಪಾರ್ಕ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಪ್ರತಿಭಟನೆ ಕೈಬಿಟ್ಟ ಆಭ್ಯರ್ಥಿಗಳು
ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದ ಪಿಎಸ್ಐ ಅಭ್ಯರ್ಥಿಗಳು ನೇಮಕಾತಿಯಾಗಿ ಒತ್ತಾಯಿಸಿ ಫ್ರೀಡಂಪಾರ್ಕ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಮರುಪರೀಕ್ಷೆ ವಿರೋಧಿಸಿ ಕಳೆದ ಮೂರು-ನಾಲ್ಕು ದಿನಗಳಿಂದ ನೂರಾರು ಪಿಎಸ್ಐ ಆಭ್ಯರ್ಥಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಇದೀಗ ಪ್ರತಿಭಟನೆ ಬಿಟ್ಟು ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ:ಸೀಬೆ ಹಣ್ಣು ಕೀಳಲು ಹೋಗಿ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಅಕ್ಕ-ತಂಗಿ ಸಾವು