ಕರ್ನಾಟಕ

karnataka

ETV Bharat / city

ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ: ಇಬ್ಬರು ಮಧ್ಯವರ್ತಿಗಳು ಸೇರಿ ಆರು ಮಂದಿ ಬಂಧಿಸಿದ ಸಿಐಡಿ

ಪಿಎಸ್​ಐ ಪ್ರಕರಣ ತನಿಖೆ ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಸಿಐಡಿ ಡಿಜಿ ಹಾಗೂ ಗೃಹ ಇಲಾಖೆ ಇದರಲ್ಲಿ ಶಾಮೀಲಾಗಿರುವವರನ್ನು ಬಂಧಿಸುವಂತೆ ಸೂಚಿಸಿದ ಬೆನ್ನಲ್ಲೇ ಇಬ್ಬರು ಮಧ್ಯವರ್ತಿಗಳು ಸೇರಿ ಆರು ಮಂದಿಯನ್ನು ಸಿಐಡಿ ಬಂಧಿಸಿದ್ದಾರೆ.

psi-recruitment-exam-case-six-members-arrested-by-cid
ಪಿಎಸ್ಐ ಪರೀಕ್ಷಾ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಸಿಐಡಿ

By

Published : May 10, 2022, 7:04 PM IST

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ‌ ಪ್ರಕರಣ ಸಂಬಂಧ ಇಂದು ಸಿಐಡಿ ಡಿಜಿ ಎಂ.ಎಸ್. ಸಂಧು ತನಿಖಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಎಸ್ಪಿ ರಾಘವೇಂದ್ರ, ಡಿವೈಎಸ್ಪಿಗಳಾದ ಶೇಖರ್ ಹಾಗೂ ನರಸಿಂಹಮೂರ್ತಿ ಸಭೆಯಲ್ಲಿ ಭಾಗಿಯಾಗಿದ್ದು, ಇದುವರೆಗೂ ತನಿಖೆಯಲ್ಲಿ ಪತ್ತೆಯಾದ ಅಂಶಗಳ ಬಗ್ಗೆ ಡಿಜಿಗೆ ಅಧಿಕಾರಿಗಳು ವರದಿ‌ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಕ್ರಮದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ಬಗೆಗೂ ಮಾಹಿತಿ ಕೇಳಿರುವ ಸಿಐಡಿ ಡಿಜಿ ಹಾಗೂ ಗೃಹ ಇಲಾಖೆ, ಈ ಪ್ರಕರಣದಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೋ ಅಂತಹವರನ್ನು ಬಂಧಿಸುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಇಬ್ಬರು ಮಧ್ಯವರ್ತಿಗಳು ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ‌. ಮಂಜುನಾಥ್, ಶ್ರೀನಿವಾಸ್, ಶರತ್, ಲೋಕೇಶ್, ಶ್ರೀಧರ್, ಹಾಗೂ ಹರ್ಷ ಬಂಧಿತ ಆರೋಪಿಗಳು ಎಂಬ ಮಾಹಿತಿ ಲಭ್ಯವಾಗಿದ್ದು, ಡಿವೈಎಸ್ಪಿ ಶೇಖರ್ ವಿಚಾರಣೆ ನಡೆಸಿದ್ದಾರೆ. ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪಿಎಸ್ಐ ಎಕ್ಸಾಂ ಬಳಿಕ ಸಿಐಡಿ ಕಚೇರಿಗೆ ಅಭ್ಯರ್ಥಿಗಳು ಬರೆದಿದ್ದ ಓಎಂಆರ್ ಶೀಟ್​ ಅನ್ನು ಸಿಐಡಿ ಕಚೇರಿಯಲ್ಲಿರುವ ನೇಮಕಾತಿ ವಿಭಾಗದಲ್ಲಿ ಇಡಲಾಗಿತ್ತು. ಈ ವೇಳೆ ಸ್ಟ್ರಾಂಗ್ ರೂಂ ಕರ್ತವ್ಯದಲ್ಲಿದ್ದ ರಿಸರ್ವ್ ಸಬ್ ಇನ್​ಸ್ಪೆಕ್ಟರ್ ಮಂಜುನಾಥ ಹಾಗೂ ಶ್ರೀನಿವಾಸ್ ಕಾರ್ಯ ನಿರ್ವಹಿಸಿದ್ದರು‌. ಸದ್ಯ ಇಬ್ಬರು ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಪಿಡಬ್ಲ್ಯೂಡಿ ಜೆಇ, ಎಇ ಪರೀಕ್ಷೆಯಲ್ಲೂ ಅಕ್ರಮ: ಪಿಎಸ್​ಐ ಕಿಂಗ್​ಪಿನ್​ಗೆ ಮತ್ತೊಂದು ಸಂಕಷ್ಟ

ABOUT THE AUTHOR

...view details