ಕರ್ನಾಟಕ

karnataka

ETV Bharat / city

ವಾರಾಂತ್ಯದ ಕರ್ಪ್ಯೂ ವೇಳೆ ಕಾರ್ಮಿಕರಿಗೆ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸಿ : ಕಾಸಿಯಾ - bus service for workers during weekend curfew

ಅನುಮತಿ ನೀಡದಿದ್ದರೆ ಕೆಲಸಕ್ಕೆ ಹೋಗಲಾಗದೇ ಜನರು ಮತ್ತೊಮ್ಮೆ ಗ್ರಾಮೀಣ ಪ್ರದೇಶಗಳೆಡೆಗೆ ಸಾಮೂಹಿಕ ವಲಸೆ ಹೋಗುವ ಸಾಧ್ಯತೆಗಳಿವೆ ಎಂದು ಕಾಸಿಯಾ ಆತಂಕ ವ್ಯಕ್ತಪಡಿಸಿದೆ..

provide BMTC bus service for workers during weekend curfew: kassia
ಕಾರ್ಮಿಕರಿಗೆ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸುವಂತೆ ಕಾಸಿಯಾ ಮನವಿ

By

Published : Jan 7, 2022, 3:56 PM IST

ಬೆಂಗಳೂರು: ವಾರಾಂತ್ಯದ ಕರ್ಪ್ಯೂ ದಿನಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಕಾರ್ಮಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಸರ್ಕಾರಕ್ಕೆ ಮನವಿ ಮಾಡಿದೆ.

ನಗರದಲ್ಲಿ ಮುಂದಿನ ಎರಡು ವಾರಾಂತ್ಯಗಳಲ್ಲಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ಕೈಗಾರಿಕೆಗಳಿಗೆ ವಿನಾಯಿತಿ ನೀಡಿದ್ದು, ಕಾರ್ಮಿಕರು ಗುರುತಿನ ಚೀಟಿ (ಐಡಿ) ತೋರಿಸಿ ಕೆಲಸಕ್ಕೆ ಹಾಜರಾಗುವಂತೆ ಅನುಮತಿ ಕೊಟ್ಟಿದೆ.

ಸಣ್ಣ ಕೈಗಾರಿಕೆಗಳ ಬಹುತೇಕ ಕಾರ್ಮಿಕರು ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ವಾರಾಂತ್ಯದ ಕರ್ಪ್ಯೂ ವೇಳೆಯಲ್ಲಿ ಸೀಮಿತ ಸಂಖ್ಯೆಯ ಬಸ್‌ಗಳು ಸಂಚರಿಸುವುದಾಗಿ ಬಿಎಂಟಿಸಿ ತಿಳಿಸಿದೆ. ಇದರಿಂದ ಕಾರ್ಮಿಕರ ಸಂಚಾರಕ್ಕೆ ಸಮಸ್ಯೆ ಆಗಲಿದೆ. ಹಾಗಾಗಿ, ಕಾರ್ಮಿಕರ ಸಂಚಾರಕ್ಕೆ ಅನುಕೂಲ ಆಗುವಂತೆ ಬಿಎಂಟಿಸಿ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ವಿನಂತಿಸಿದೆ.

ಇದನ್ನೂ ಓದಿ:ಕರ್ಫ್ಯೂ ವೇಳೆ ಅನಗತ್ಯ ಓಡಾಡಿದರೆ ಬಂಧನ ಗ್ಯಾರಂಟಿ : ಪೊಲೀಸ್ ಆಯುಕ್ತ ಕಮಲ್‌ ಪಂತ್ ಎಚ್ಚರಿಕೆ

ಅನುಮತಿ ನೀಡದಿದ್ದರೆ ಕೆಲಸಕ್ಕೆ ಹೋಗಲಾಗದೇ ಜನರು ಮತ್ತೊಮ್ಮೆ ಗ್ರಾಮೀಣ ಪ್ರದೇಶಗಳೆಡೆಗೆ ಸಾಮೂಹಿಕ ವಲಸೆ ಹೋಗುವ ಸಾಧ್ಯತೆಗಳಿವೆ ಎಂದು ಕಾಸಿಯಾ ಆತಂಕ ವ್ಯಕ್ತಪಡಿಸಿದೆ.

ABOUT THE AUTHOR

...view details