ETV Bharat Karnataka

ಕರ್ನಾಟಕ

karnataka

ETV Bharat / city

ಬಹುಮತ ಸಾಬೀತುಪಡಿಸಲು ಸರ್ಕಾರಕ್ಕೆ ಗವರ್ನರ್​​ ಡೆಡ್​ಲೈನ್​... ಸಿಎಂಗೆ ಖಡಕ್​ ನಿರ್ದೇಶನ - undefined

ನಾಳೆ ಮಧ್ಯಾಹ್ನ 1.30ರೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಖಡಕ್​ ನಿರ್ದೇಶನ ನೀಡಿದ್ದಾರೆ.

ರಾಜ್ಯಪಾಲರ ಆದೇಶದ ಪ್ರತಿ
author img

By

Published : Jul 18, 2019, 9:41 PM IST

ಬೆಂಗಳೂರು: ನಾಳೆ ಮಧ್ಯಾಹ್ನ 1.30 ರೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸಿಎಂ ಕುಮಾರಸ್ವಾಮಿ ಅವರಿಗೆ ಖಡಕ್​ ನಿರ್ದೇಶನ ನೀಡಿದ್ದಾರೆ.

in article image
ರಾಜ್ಯಪಾಲರ ಆದೇಶದ ಪ್ರತಿ

ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸ ಮತಯಾಚನೆ ಚರ್ಚೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಗದ್ದಲ ನಡೆಸಿದರು. ಇದರಿಂದ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿತ್ತು. ಬಳಿಕ ರಾಜ್ಯಪಾಲರು, ಇಂದು ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಗೊತ್ತುವಳಿ ಮಂಡಿಸುವಂತೆ ಸಿಎಂಗೆ ಸೂಚನೆ ಕೊಟ್ಟಿದ್ದರು.

ರಾಜ್ಯಪಾಲರ ಆದೇಶದ ಪ್ರತಿ (2)

ಬಹುಮತ ಸಾಬೀತುಪಡಿಸಲಾಗದ ಮೈತ್ರಿ ಸರ್ಕಾರದ ನಾಯಕರು ಸದನದಲ್ಲಿ ಕೋಲಾಹಲ ಎಬ್ಬಿಸಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲರನ್ನು ಬಿಜೆಪಿ ಕಿಡ್ನಾಪ್​ ಮಾಡಿದೆ ಎಂದು ಪ್ರತಿಭಟನೆ ನಡೆಸಿದ್ದರು. ಇದರಿಂದ ವಿಧಾನಸಭೆಯ ಉಪಾಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡಿದರು.

ರಾಜ್ಯಪಾಲರ ಆದೇಶದ ಪ್ರತಿ (3)

ಇಂದು ಸದನದಲ್ಲಾದ ಬೆಳವಣಿಗೆಯನ್ನು ಗಮನಿಸಿರುವ ರಾಜ್ಯಪಾಲರು, ಬಹುಮತ ಸಾಬೀತುಪಡಿಸುವುದು ವಿಳಂಬವಾಗುತ್ತಿದೆ ಎಂದು ಭಾವಿಸಿ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ನಾಳೆ ಮಧ್ಯಾಹ್ನದ ಒಳಗೆ ಬಹುಮತ ಸಾಬೀತುಪಡಿಸಲು ಗಡುವನ್ನೂ ಸಹ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details