ಕರ್ನಾಟಕ

karnataka

ETV Bharat / city

ಸಚಿವ ಶ್ರೀರಾಮುಲು ಪಿಎ ಬಂಧನಕ್ಕೆ ಆಗ್ರಹ.. ಸಿಸಿಬಿ ಕಚೇರಿ ಎದುರು ಆಪ್ ಪಕ್ಷದಿಂದ ದಿಢೀರ್ ಪ್ರತಿಭಟನೆ - Sriramulu PA Rajanna

ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣನನ್ನು ಬಂಧಿಸಿ, ಯಡಿಯೂರಪ್ಪ‌ ಪುತ್ರ ವಿಜಯೇಂದ್ರ ಅವರನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಿಸಿಬಿ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.

Bangalore
ಶ್ರೀರಾಮಲು ಪಿಎ ಬಂಧನಕ್ಕೆ ಆಗ್ರಹಿಸಿ ಸಿಸಿಬಿ ಕಚೇರಿ ಮುಂಭಾಗ ಆಪ್ ಪಕ್ಷದಿಂದ ಧಿಡೀರ್ ಪ್ರತಿಭಟನೆ

By

Published : Jul 3, 2021, 1:36 PM IST

ಬೆಂಗಳೂರು: ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಸಹಾಯಕ(ಪಿಎ) ರಾಜಣ್ಣನನ್ನು ಬಂಧಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ನಗರದ ಅಪರಾಧ ಪತ್ತೆ ವಿಭಾಗ(ಎಸಿಬಿ)ದ ಕಚೇರಿಗೆ ಮುತ್ತಿಗೆ ಯತ್ನ ನಡೆಯಿತು.

ಶ್ರೀರಾಮುಲು ಪಿಎ ಬಂಧನಕ್ಕೆ ಆಗ್ರಹಿಸಿ ಸಿಸಿಬಿ ಕಚೇರಿ ಮುಂಭಾಗ ಆಪ್ ಪಕ್ಷದಿಂದ ದಿಢೀರ್ ಪ್ರತಿಭಟನೆ

ಶ್ರೀರಾಮುಲು ಪಿಎ ರಾಜಣ್ಣನನ್ನು ಬಂಧಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ‌ ಅವರ ಪುತ್ರ ವಿಜಯೇಂದ್ರ ಅವರನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಚಾಮರಾಜಪೇಟೆಯ ಸಿಸಿಬಿ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.

ಆಪ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಕೆಎಸ್​ಆರ್​ ಬಸ್​ನಲ್ಲಿ ಸ್ಥಳದಿಂದ ಕರೆದೊಯ್ದರು.

ಇದನ್ನೂ ಓದಿ:ಶ್ರೀರಾಮಲು ಪಿಎ ವಂಚನೆ ಆರೋಪ ಪ್ರಕರಣ : ಒಂದೇ ದಿನಕ್ಕೆ ವಿಚಾರಣೆ ಮುಗಿಸಿ ಬಿಟ್ಟು ಕಳುಹಿಸಿದ ಸಿಸಿಬಿ

ABOUT THE AUTHOR

...view details