ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಮನವೊಲಿಸಿದ್ದಾರೆ.
ಮುಸ್ಲಿಂ ಮುಖಂಡರೊಂದಿಗೆ ಎಸಿಪಿ ಸಭೆ: ಪೌರತ್ವ ಕಾಯ್ದೆ ಬಗ್ಗೆ ಮಾಹಿತಿ ನೀಡಿ ಮನವೊಲಿಕೆ - ಯಾವುದೇ ಗಲಭೆ, ಪ್ರತಿಭಟನೆ ಮಾಡದಂತೆ ಮನವಿ ಮಾಡಿದ ಎಸಿಪಿ
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರೊಂದಿಗೆ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ ಮನವೊಲಿಸಿದ್ದಾರೆ.
ಮುಸ್ಲಿಂ ಮುಖಂಡರೊಂದಿಗೆ ಎಸಿಪಿ ಸಭೆ: ಪೌರತ್ವ ಕಾಯಿದೆ ಬಗ್ಗೆ ಸಂಪೂರ್ಣ ವಿವರಣೆ
ಮಡಿವಾಳ ಹಾಗೂ ಚಿನ್ನಯ್ಯನಪಾಳ್ಯದ ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಮಡಿವಾಳ ಎಸಿಪಿ ಕರಿಬಸವನಗೌಡ ಸಭೆ ನಡೆಸಿ ಎನ್ಆರ್ಸಿ ಹಾಗೂ ಸಿಎಎ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಮುಸ್ಲಿಂ ಧಾರ್ಮಿಕ ಮುಖಂಡರ ಜೊತೆ ಸಭೆ ನೆಡೆಸಿ ಪೌರತ್ವ ನೋಂದಣಿ ಕಾಯ್ದೆ ಕೇವಲ ಅಸ್ಸೋಂ ರಾಜ್ಯಕ್ಕೆ ಅನ್ವಯಿಸುತ್ತದೆ. ಸಾವರ್ಜನಿಕರು ಸರಿಯಾದ ದಾಖಲೆ ನೀಡಿ ಎಂದು ವಿವರಿಸಿದ್ದಾರೆ. ಜೊತೆಗೆ ಯಾವುದೇ ಗಲಭೆ, ಪ್ರತಿಭಟನೆ ಮಾಡದಂತೆ ಮನವಿ ಮಾಡಿದ ಎಸಿಪಿ ಮಾತಿಗೆ ಮುಸ್ಲಿಂ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.