ಬೆಂಗಳೂರು:ಕರ್ನಾಟಕ ಗೃಹ ಮಂಡಳಿ ಸೂರ್ಯನಗರದ ನಾಲ್ಕನೇ ಹಂತದ ಬಡಾವಣೆ ನಿರ್ಮಿಸಲು ಈಗಾಗಲೇ ಚಾಲನೆ ದೊರೆತಿದ್ದು, ಈ ಜಾಗವನ್ನೇ ನಂಬಿಕೊಂಡಿದ್ದ ಸಾಗುವಳಿದಾರ ಭೂಮಿ ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪ್ರಾಂತ ರೈತ ಸಂಘ ಆನೇಕಲ್ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ - anekal protest news
ಕರ್ನಾಟಕ ಗೃಹ ಮಂಡಳಿ ಸೂರ್ಯನಗರದ ನಾಲ್ಕನೇ ಹಂತದ ಬಡಾವಣೆ ನಿರ್ಮಿಸಲು ಈಗಾಗಲೇ ಚಾಲನೆ ದೊರೆತಿದ್ದು, ಈ ಜಾಗವನ್ನೇ ನಂಬಿಕೊಂಡಿದ್ದ ಸಾಗುವಳಿದಾರ ಭೂಮಿ ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಪ್ರಾಂತ ರೈತ ಸಂಘ ಆನೇಕಲ್ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಸಾಗುವಳಿದಾರರ ಭೂಮಿಯನ್ನು ವಶಪಡಿಸಿಕೊಂಡು ಸರಿಯಾದ ಪರಿಹಾರ ನೀಡುತ್ತಿಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಕಾನೂನಿನ ಪ್ರಕಾರ ನಾಲ್ಕು ಎಕರೆ ಜಮೀನು ನೀಡಬೇಕೆಂದು ಇದ್ರೂ ಸಹ ಅದನ್ನು ನೀಡದೇ ಅವರನ್ನು ಒಕ್ಕಲೆಬ್ಬಿಸುವಂತಹ ಕೆಲಸವಾಗುತ್ತಿದೆ. ಬಗರ್ ಹುಕುಂ ಸಾಗುವಳಿದಾರರಿಗೆ ಶಿವಮೊಗ್ಗ ಮಾದರಿಯಲ್ಲಿ ಪರಿಹಾರ ಹಾಗೂ ಕೊಟ್ಟ ಜಮೀನಿಗೆ ಮಾರುಕಟ್ಟೆ ದರದ ನಾಲ್ಕು ಪಟ್ಟು ದರ ನೀಡಬೇಕು. ಹಾಗೆಯೇ ಬಗರ್ ಹುಕುಂ ಸಾಗುವಳಿ ಪತ್ರಕ್ಕಾಗಿ ಬಿಡುಗಡೆ ಮಾಡಿರುವ ಫಾರಂ ನಂ. 57 ಸ್ವೀಕಾರಕ್ಕೆ ಸಂಬಂಧಿಸಿದಂತೆ ಮರು ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.
TAGGED:
anekal protest news