ಆನೇಕಲ್: ರಾತ್ರಿ ಪಾಳೆಯದಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳುವಂತೆ ನಿರ್ಧಾರ ಹೊರಡಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, 109 ನೇ ಮಹಿಳಾ ದಿನಾಚರಣೆಯನ್ನು ಜೈಲ್ ಬರೋ ಎಂಬ ಘೋಷಣೆ ಕೂಗುವ ಮೂಲಕ ಸಿಐಟಿಯು ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ವಿರುದ್ಧ ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ - 109 ನೇ ಮಹಿಳಾ ದಿನಾಚರಣೆ
ರಾತ್ರಿ ಪಾಳೆಯದಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳುವಂತೆ ನಿರ್ಧಾರ ಹೊರಡಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, 109 ನೇ ಮಹಿಳಾ ದಿನಾಚರಣೆಯನ್ನು ಜೈಲ್ ಬರೋ ಎಂಬ ಘೋಷಣೆ ಕೂಗುವ ಮೂಲಕ ಸಿಐಟಿಯು ವತಿಯಿಂದ ಪ್ರತಿಭಟನೆ ನಡೆಸಲಾಯಿತು.
![ಸರ್ಕಾರ ವಿರುದ್ಧ ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ Protest by CITU activists against the government](https://etvbharatimages.akamaized.net/etvbharat/prod-images/768-512-6323438-thumbnail-3x2-lek.jpg)
ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ
ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ
ಮಹಿಳೆಯರಿಗೆ ಸಮಾನ ವೇತನ, ಸಮಾನ ಹಕ್ಕುಗಳನ್ನು ನೀಡುವಲ್ಲಿ ಸೋತಿರುವ ಸರ್ಕಾರಗಳು, ಮಹಿಳೆಯರನ್ನು ಶೋಷಿಸುತ್ತಲೇ ಬಂದಿದೆ. ಆಶಾ ಕಾರ್ಯಕರ್ತೆಯರು, ಅಡುಗೆ ಸಹಾಯಕರನ್ನು ನೌಕರರೆಂದು ಪರಿಗಣಿಸಿ ಎಂದು ಸರ್ಕಾರಗಳಿಗೆ ಸಿಐಟಿಯು ತಾಕೀತು ಮಾಡಿದೆ. ಆನೇಕಲ್ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಮಹಿಳಾ ಕಾರ್ಯಕರ್ತರು ಕೆಂಪು ಬಾವುಟ ಹಿಡಿದು ಪ್ರತಿಭಟನೆ ಮಾಡಿದರು.