ಬೆಂಗಳೂರು: ನಗರದಲ್ಲಿ ಸೆಕ್ಷನ್ 144 ಜಾರಿ ನಡುವೆಯೂ ಪೌರತ್ವ ಕಾಯ್ದೆ ವಿರೋಧಿಸಿ ಗುರುವಾರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 244 ಜನರನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ವಿರುದ್ಧ ಪ್ರಕರಣ ದಾಖಲಾಗಿದೆ.
CAA ಪ್ರತಿಭಟನೆ: 244 ಮಂದಿ ವಶಕ್ಕೆ, ಶಾಸಕ ರಿಜ್ವಾನ್, ರಾಮಚಂದ್ರ ಗುಹಾ ವಿರುದ್ಧ ಪ್ರಕರಣ - ಬೆಂಗಳೂರಲ್ಲಿ CAA ಪ್ರತಿಭಟನೆ
ಗುರುವಾರ ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 244 ಜನರನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಶಾಸಕ ರಿಜ್ವಾನ್ ಅರ್ಷದ್ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ವಿರುದ್ಧ ಪ್ರಕರಣ ದಾಖಲಾಗಿದೆ. ಶುಕ್ರವಾರ ಕೂಡ ಬೆಂಗಳೂರಲ್ಲಿ ಸೆ. 144 ಮುಂದುವರೆಯಲಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
![CAA ಪ್ರತಿಭಟನೆ: 244 ಮಂದಿ ವಶಕ್ಕೆ, ಶಾಸಕ ರಿಜ್ವಾನ್, ರಾಮಚಂದ್ರ ಗುಹಾ ವಿರುದ್ಧ ಪ್ರಕರಣ Protest against CAA](https://etvbharatimages.akamaized.net/etvbharat/prod-images/768-512-5431382-thumbnail-3x2-megha.jpg)
ಪ್ರತಿಭಟನಾಕಾರರ ವಿರುದ್ಧ ಎಸ್.ಜೆ ಪಾರ್ಕ್ ಠಾಣೆಯಲ್ಲಿಒಟ್ಟು 8 ಪ್ರಕರಣ ದಾಖಲಾಗಿದ್ದು, ಶುಕ್ರವಾರ ಕೂಡ ಬೆಂಗಳೂರಲ್ಲಿಸೆಕ್ಷನ್144 ಮುಂದುವರೆಯಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಗುರುವಾರ ನಡೆದ ಪ್ರತಿಭಟನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ನಮ್ಮ ಪೊಲೀಸ್ ಸಿಬ್ಬಂದಿ ತಾಳ್ಮೆಯಿಂದ ಕೆಲಸ ನಿರ್ವಹಿಸಿದ್ದಾರೆ. ಯಾರೂ ಸಹ, ಮುಖ್ಯವಾಗಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗದಂತೆ ಹಾಗೂ ಮಾಧ್ಯಮಗಳು ಸಹ ಗಲಭೆ ದೃಶ್ಯಗಳನ್ನ ಪ್ರಸಾರ ಮಾಡದಂತೆ ಮನವಿ ಮಾಡುತ್ತಿದ್ದೇನೆ ಎಂದ ಭಾಸ್ಕರ್ ರಾವ್, ಈ ಸಮಯದಲ್ಲಿ ಕಾನೂನು ಉಲ್ಲಂಘಿಸಿದರೆ ಪ್ರಕರಣ ದಾಖಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ನೀಡುತ್ತಿರುವವರ ಮೇಲೆ ಕಣ್ಣಿಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
TAGGED:
ಬೆಂಗಳೂರಲ್ಲಿ CAA ಪ್ರತಿಭಟನೆ