ಬೆಂಗಳೂರು: ಕನ್ನಡನಾಡು ಅಂದ್ರೆ ಬಸವಣ್ಣನ ನಾಡು. ಇಂತಹ ನಾಡಿನಲ್ಲಿ ಈವರೆಗೂ ಒಬ್ಬ ದಲಿತ ಮುಖ್ಯಮಂತ್ರಿ ಆಗಿಲ್ಲ ಎಂದರೆ, ಈ ನಾಡಿನ ಕನಸೇ ನನಸಾಗಿಲ್ಲ ಎಂದರ್ಥ. ಮಲ್ಲಿಕಾರ್ಜುನ ಖರ್ಗೆ ದೇಶದ ಪ್ರಧಾನಿಯಾಗುವ ಅರ್ಹತೆಯುಳ್ಳವರು, ಆದರೆ ರಾಷ್ಟ್ರೀಯ ಪಕ್ಷ ಹಾಗೂ ಜನ ಮನಸ್ಸು ಮಾಡದ ಹಿನ್ನಲೆ ಸಿಎಂ ಆಗಿಲ್ಲ ಎಂದು ಲೇಖಕ ಪ್ರೊ.ಹೆಚ್.ಟಿ ಪೋತೆ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಪ್ರೊ.ಹೆಚ್.ಟಿ ಪೋತೆ ಬರೆದಿರುವ 'ಬಾಬಾಸಾಹೇಬರೆಡೆಗೆ' ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಜೀವನಕಥನ ಕೃತಿ ಬಿಡುಗಡೆ ಮತ್ತು ವಿಶೇಷೋಪನ್ಯಾಸ ಕಾರ್ಯಕ್ರಮದ ಬಳಿಕ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ. ಖರ್ಗೆಯವರು ಅಪರೂಪದ ರಾಜಕಾರಣಿ. ಕಳೆದ 50 ವರ್ಷದಿಂದ ಮೌಲ್ಯಯುತ ರಾಜಕಾರಣ ಮಾಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶದಂತೆ ಶಿಕ್ಷಣ, ಸಂಘಟನೆ, ಹೋರಾಟ ತತ್ತ್ವದಡಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ನಾಡಲ್ಲಿ ದಲಿತ ಮುಖ್ಯಮಂತ್ರಿಯಾಗಲು ಅವಕಾಶ ನೀಡದೇ ಇರುವುದು ಈ ನಾಡಿನ ಕನಸು ನನಸಾಗಿಲ್ಲ ಎಂದರ್ಥ ಎಂದರು.