ಕರ್ನಾಟಕ

karnataka

ETV Bharat / city

ಪರಿಷತ್​​ನಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕದ ಮೇಲೆ ಪರ-ವಿರೋಧ ಸುದೀರ್ಘ ಚರ್ಚೆ - Pro-opposition long debate on APMC

ರೈತರ ಪಾಲಿಗೆ ಎಪಿಎಂಸಿ ತಿದ್ದುಪಡಿ ವಿಧೇಯಕ ಮಾರಕ ಎಂದು ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದ ಸದಸ್ಯರು ವಿಧೇಯಕದಿಂದ ಲಾಭ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್​
ವಿಧಾನ ಪರಿಷತ್​

By

Published : Dec 9, 2020, 9:05 PM IST

ಬೆಂಗಳೂರು:ಮಧ್ಯಾಹ್ನ ಭೋಜನ ವಿರಾಮದ ನಂತರ ಎಪಿಎಂಸಿ ತಿದ್ದುಪಡಿ ವಿಧೇಯಕದ ಮೇಲೆ ವಿಧಾನ ಪರಿಷತ್​ನಲ್ಲಿ ಪರ-ವಿರೋಧವಾಗಿ ಹಲವು ನಾಯಕರು ಸುದೀರ್ಘ ಚರ್ಚೆ ನಡೆಸಿದರು.

ಮರಿತಿಬ್ಬೇಗೌಡ, ಅಲ್ಲಂ ವೀರಭದ್ರಪ್ಪ, ಭೋಜೇಗೌಡ, ಪಿ.ಆರ್.ರಮೇಶ್, ಸಾಯ್ಬಣ್ಣ ತಳವಾರ, ತಿಪ್ಪೇಸ್ವಾಮಿ, ಪ್ರಕಾಶ್ ರಾಥೋಡ್, ಆರ್.ಬಿ.ತಿಮ್ಮಾಪೂರ್, ಬಸವರಾಜ್ ಇಟಗಿ, ಬಿ.ಕೆ.ಹರಿಪ್ರಸಾದ್ ಮತ್ತಿತರ ನಾಯಕರು ಸುದೀರ್ಘ ಚರ್ಚೆ ನಡೆಸಿದರು. ರೈತರ ಪಾಲಿಗೆ ಮಾರಕ ಎಂದು ಪ್ರತಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದ ಸದಸ್ಯರು ವಿಧೇಯಕದಿಂದ ಲಾಭ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ಬಹುರಾಷ್ಟ್ರೀಯ ಕಂಪನಿಗಳ ಪ್ರಾಬಲ್ಯ ಹೆಚ್ಚಾಗಲಿದೆ. ಸಣ್ಣ ವ್ಯಾಪಾರಿಗಳು, ತೂಕ ಹಾಕುವವರು, ಹಮಾಲಿಗಳು ಉದ್ಯೋಗ ಕಳೆದುಕೊಳ್ಳುತ್ತಾರೆ. ಇರುವ ಭೂಮಿ ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಡಬೇಡಿ. ಕಂಪನಿಗಳು ಸೇವೆ ಮಾಡಲು ಬರಲ್ಲ, ವ್ಯಾಪಾರ ಮಾಡಲು ಬರುತ್ತವೆ. ಭವಿಷ್ಯದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ರೈತರನ್ನು ಗುಲಾಮರನ್ನಾಗಿಸುತ್ತಾರೆ. ಇದು ರೈತರ ಭವಿಷ್ಯದ ಪ್ರಶ್ನೆ. ವಿಧೇಯಕದ ಮೇಲೆ ನಮಗೆ ಸಾಕಷ್ಟು ಅನುಮಾನ, ಗೊಂದಲ ಇದೆ. ಇದನ್ನು ನಾವು ಒಪ್ಪಲ್ಲ ಎಂದು‌ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಅಭಿಪ್ರಾಯಪಟ್ಟರು.

ಆದರೆ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಎಸ್.ಟಿ.ಸೋಮಶೇಖರ್, ಆರ್.ಅಶೋಕ್, ಬಿ.ಸಿ.ಪಾಟೀಲ್ ವಿಧೇಯಕದ ಪರವಾಗಿ ಸಾಕಷ್ಟು ಮಾಹಿತಿ ನೀಡಿದರು. ಸದಸ್ಯರು ಕಾಯ್ದೆ ಜಾರಿಯಿಂದ ಆಗುವ ಲಾಭ, ಮಧ್ಯವರ್ತಿಗಳ ಆಟಾಟೋಪಕ್ಕೆ ನಿಯಂತ್ರಣ, ರೈತರ ವ್ಯಾಪಾರಕ್ಕೆ ಮುಕ್ತ ಅವಕಾಶ ಸಿಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆಗಾಗ ಒಂದಿಷ್ಟು ಗದ್ದಲ, ಮಾತಿನ ಚಕಮಕಿ ಜತೆ ಸುದೀರ್ಘ ಚರ್ಚೆ ನಡೆಯಿತು. ಕಾಂಗ್ರೆಸ್ ಸದಸ್ಯ ಆರ್​.ಬಿ.ತಿಮ್ಮಾಪೂರ್ ತಮ್ಮ ಮಾತಿನ ಭರದಲ್ಲಿ ಯೋಗ್ಯತೆ ಎಂಬ ಶಬ್ದ ಬಳಸಿದ್ದು ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಸಾಕಷ್ಟು ಗದ್ದಲದ ನಂತರ ಈ ವಿಧೇಯಕವನ್ನು ಸದನ ಸಮಿತಿಗೆ ವಹಿಸಿ ಎಂದು ಒತ್ತಾಯಿಸಿದರು.

ABOUT THE AUTHOR

...view details