ಕರ್ನಾಟಕ

karnataka

'ಪಿಎಸ್‌ಐ ಅಕ್ರಮದಲ್ಲಿ ಸದನಕ್ಕೆ ಗೃಹ ಸಚಿವರಿಂದ ಸುಳ್ಳು ಉತ್ತರ': ಪಂಚ ಪ್ರಶ್ನೆ ಕೇಳಿದ ಪ್ರಿಯಾಂಕ್ ಖರ್ಗೆ

ಸರ್ಕಾರದ ವಿರುದ್ಧ ನಿರಂತರವಾಗಿ ಪ್ರತಿಪಕ್ಷ ಕಾಂಗ್ರೆಸ್ ಹೋರಾಟ ಆರಂಭಿಸಿದ್ದು, ಪ್ರಿಯಾಂಕ್ ಖರ್ಗೆ ತಮ್ಮ ಸರಣಿ ಟ್ವೀಟ್ ಮೂಲಕ ಆಕ್ರೋಶ ಮುಂದುವರೆಸಿದ್ದಾರೆ.

By

Published : May 8, 2022, 10:25 AM IST

Published : May 8, 2022, 10:25 AM IST

Priyank Kharge
ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಮುಂದುವರಿಸಿರುವ ಪ್ರಿಯಾಂಕ್ ಖರ್ಗೆ ಟ್ವೀಟ್ ವಾರ್ ನಡೆಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ, ಎಂಎಲ್​​ಸಿ ಎಸ್.ರವಿಯವರು ದಿನಾಂಕ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1438ಗೆ ನೀಡಿದ್ದ ಅಧಿಕೃತ ಉತ್ತರದಲ್ಲಿ 'ಪಿಎಸ್​​ಐ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಹಿರಿಯ ಪೊಲೀಸ್ ಅಧಿಕಾರಿಗಳು ವರದಿ ನೀಡಿದ್ದಾರೆ' ಎಂದು ಸುಳ್ಳು ಹೇಳಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

2022ರ ಮಾ. 10ರಂದು ಪ್ರಶ್ನೆ ಕೇಳಿದ್ದ ರವಿಕುಮಾರ್ ಅವರಿಗೆ ನೀವು‌ ಸುಳ್ಳು ಉತ್ತರ ಕೊಟ್ಟಿದ್ದೀರಿ. ಅಂದು ನೀವು ಉಲ್ಲೇಖಿಸಿದ್ದ ವರದಿ ಕುರಿತು ಪಂಚ ಪ್ರಶ್ನೆ ಕೇಳಬಯಸುತ್ತೇನೆ.

  • ನೇಮಕಾತಿ ಅಕ್ರಮದ ವರದಿಯಲ್ಲೇನಿದೆ?.
  • ಈ ವರದಿ ಕೊಟ್ಟ ಅಧಿಕಾರಿಗಳು ಯಾರು?.
  • ಆ ವರದಿಯನ್ನ ಈವರೆಗೂ ಸಿಐಡಿಗೆ ಸಲ್ಲಿಸಿಲ್ಲವೇಕೆ?
  • ಆ ಅಧಿಕಾರಿಗಳನ್ನ ರಕ್ಷಿಸಲು ಪಡೆಯುತ್ತಿರುವ ಕಮಿಷನ್ ಎಷ್ಟು?.
  • ನಿಮಗೆ ಅಧಿಕಾರಿಗಳು ಸುಳ್ಳು‌ ಹೇಳಿದ್ದರೇ?, ಇಲ್ಲಾ ನೀವೇ ಸದನದಲ್ಲಿ‌ ಸುಳ್ಳು ಹೇಳಿದ್ದೀರಾ? ಎಂದು ಕೇಳಿದ್ದಾರೆ.

ನನಗೆ ಮೂರು ಬಾರಿ ನೋಟಿಸ್​​ ಕೊಟ್ಟಿದ್ದೀರಾ. ನನಗಿಂತ ಮೊದಲು ಹಗರಣದ ಬಗ್ಗೆ ಪತ್ರ ಬರೆದಿದ್ದು ಯಾರು?. ಸಚಿವ ಪ್ರಭು ಚವ್ಹಾಣ್, ಸಂಕನೂರು, ಶಶಿಲ್ ನಮೋಶಿಗೆ ಇನ್ನೂ ನೋಟಿಸ್​​ ಕೊಟ್ಟಿಲ್ಲವೇಕೆ?. ಇದು ಯಾವ ಸೀಮೆ ತನಿಖೆ ಸ್ವಾಮಿ ಎಂದು ಗೃಹ ಸಚಿವರ ವಿರುದ್ಧ ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ದಿನ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಎಲ್ಲ ವಿಚಾರವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಧಾನಪರಿಷತ್ ಸದಸ್ಯರ ಪ್ರಶ್ನೆ ಹಾಗೂ ಅದಕ್ಕೆ ಉತ್ತರ ನೀಡಿರುವ ಸರ್ಕಾರ ಮತ್ತು ಪ್ರಿಯಾಂಕ್ ಖರ್ಗೆ ನೋಟಿಸ್ ಕೊಟ್ಟಿರುವ ವಿಚಾರವನ್ನು ಸಹ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಗುಡುಗಿದ್ದರು.

ಇದನ್ನೂ ಓದಿ:'ಪಿಎಸ್‌ಐ ಅಕ್ರಮದ ಬಗ್ಗೆ ಪ್ರಭು ಚವ್ಹಾಣ್ ಪತ್ರ ಬರೆದಾಗ ಯಾಕೆ ಕ್ರಮ ಕೈಗೊಳ್ಳಲಿಲ್ಲ?'

ABOUT THE AUTHOR

...view details