ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ದರ್ಶನ್ ಹುಟ್ಟು ಹಬ್ಬದ ವೇಳೆ ಪೊಲೀಸ್ ಪೇದೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಮಾತಾಡಿ ದರ್ಶನ್ ಹುಟ್ಟಹಬ್ಬಕ್ಕೆ ಆಯೋಜಕರು ಅನುಮತಿ ಪಡೆದುಕೊಂಡಿದ್ದರು. ಅದರೆ ಹುಟ್ಟುಹಬ್ಬದ ದಿನ ಹೆಚ್ಚಾಗಿ ಜನ ಸೇರಿದ್ರು. ಈ ವೇಳೆ ಅಭಿಮಾನಿಗಳನ್ನ ಕಂಟ್ರೋಲ್ ಮಾಡ್ತಿದ್ದ ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆಂದು ತಿಳಿಸಿದರು.
ಡಿ-ಬಾಸ್ ಅಭಿಮಾನಿಗಳು ಪೇದೆ ಮೇಲೆ ಕಲ್ಲೆಸೆದ ಪ್ರಕರಣ: ಡಿಸಿಪಿ ರಮೇಶ್ ಬಾನೋತ್ ಹೇಳಿದ್ದೇನು? - ಹಲ್ಲೆ ಮಾಡಿರುವ ಬಗ್ಗೆ ಆಯೋಜಕರನ್ನ ವಿಚಾರಣೆ ಮಾಡಲಾಗುತ್ತಿದೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ವೇಳೆ ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಪ್ರತಿಕ್ರಿಯಿಸಿದ್ದಾರೆ. ದರ್ಶನ್ ಹುಟ್ಟಹಬ್ಬಕ್ಕೆ ಆಯೋಜಕರು ಅನುಮತಿ ಪಡೆದಿದ್ದರು. ಅದರೆ ಹುಟ್ಟುಹಬ್ಬದ ದಿನ ಹೆಚ್ಚಾಗಿ ಜನ ಸೇರಿದ್ರು. ಈ ವೇಳೆ ಅಭಿಮಾನಿಗಳನ್ನ ನಿಯಂತ್ರಿಸುವಾಗ ಅವರು ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜ್ನಾನಭಾರತಿ ಪೊಲೀಸ್ ಪೇದೆ ದೇವರಾಜ್ ಕೂಡ ಕರ್ತವ್ಯ ನಿರ್ವಹಣೆ ಮಾಡ್ತಿದ್ದು ಕಲ್ಲು ಬಂದು ಪೇದೆ ದೇವರಾಜ್ ಮೂಗಿನ ಮೇಲೆ ಬಿದ್ದಿದೆ. ಸದ್ಯ ಈಗ ಮೂಗಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಕಲ್ಲೆಸೆದಿರುವ ಬಗ್ಗೆ ಆಯೋಜಕರನ್ನ ವಿಚಾರಣೆ ಮಾಡಲಾಗುತ್ತಿದೆ. ದರ್ಶನ್ ಹುಟ್ಟುಹಬ್ಬ ದಂದು ಪೊಲೀಸರು ಸೂಕ್ತ ರೀತಿಯಲ್ಲಿ ಬಂದೋಬಸ್ತ್ ಮಾಡಿದ್ರು. ಆದ್ರೆ ಈ ರೀತಿ ಆಗಿರುವುದು ಅವರ ಖಾಸಗಿ ಭದ್ರತೆಯ ಲೋಪ ಪ್ರಕರಣದ ಬಗ್ಗೆ ಆರ್ ಆರ್ ನಗರ ಇನ್ಸ್‌ಪೆಕ್ಟರ್ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಸಾರ್ವಜನಿಕರ ವಾಹನಗಳು ಜಖಂ ಆಗಿರುವ ಬಗ್ಗೆ ಎನ್ ಸಿ ಆರ್ ದಾಖಲಾಗಿತ್ತು.
ಇದೀಗಾ ಅದನ್ನ ಸೇರಿ ಎರಡು FIRಗಳು ದರ್ಶನ ಅವರ ಅಭಿಮಾನಿಗಳ ವಿರುದ್ಧ ದಾಖಲಾಗಿವೆ. ಆಯೋಜಕರು ಪ್ರಮುಖ ಹೊಣೆಗಾರರು ಆಗುತ್ತಾರೆ. ಅಕ್ಕಪಕ್ಕದ ನಿವಾಸಿಗಳು ಏನಾದ್ರು ಹಲ್ಲೆ, ಹಾನಿಯಾಗಿದ್ರೆ ದೂರು ನೀಡಿದ್ರೆ ದೂರು ಸ್ವೀಕರಿಸುತ್ತೇವೆ ಎಂದು ಡಿಸಿಪಿ ಹೇಳಿದ್ದಾರೆ. ಮತ್ತೊಂದೆಡೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೋವಿಂದ ರಾಜುಗೆ ಆರ್ ಆರ್ ನಗರ ಇನ್ಸ್‌ಪೆಕ್ಟರ್ ನವೀನ್ ನೋಟಿಸ್ ನೀಡಿದ್ದಾರೆ.