ಕರ್ನಾಟಕ

karnataka

ETV Bharat / city

ನಮ್ಗೂ ಮನೆ, ಮಕ್ಕಳು ಇದಾರೆ ಸಾರ್​... ಕೊರೊನಾ ಭಯದಲ್ಲೇ ಕೆಲಸ ನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್ಸ್​​ ನೋವಿನ ಕಥೆ! - ಲಾಕ್​ಡೌನ್​ ಸೆಕ್ಯೂರಿಟಿ ಗಾರ್ಡ್​ ಸಮಸ್ಯೆ

ಕೊರೊನಾ ಭೀತಿಗೆ ಎಲ್ಲಾ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು, ಉದ್ಯೋಗಿಗಳಿಗೆ ಸಂಬಳ ಸಹಿತ ರಜೆ ಸಿಕ್ಕಿದೆ. ಆದ್ರೆ ಭೀಕರ ಕೊರೊನಾ ಭಯದ ಮಧ್ಯೆ ಸೆಕ್ಯೂರಿಟಿ ಗಾರ್ಡ್​ಗಳು ಹಗಲಿರುಳು ಎನ್ನದೆ ಕೆಲಸ ನಿರ್ವಹಿಸಬೇಕಿದೆ. ಈ ಕುರಿತು ಈಟಿವಿ ಭಾರತದ ಜೊತೆ ಗಾರ್ಡ್​ಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

private-company-security-guard-working-in-lock-down
ಸೆಕ್ಯೂರಿಟಿ ಗಾರ್ಡ್ಸ್​​

By

Published : Apr 20, 2020, 5:25 PM IST

ಬೆಂಗಳೂರು: ಕೊರೊನಾ ಭೀತಿಯಿಂದ ಜನಸಾಮಾನ್ಯರು ಸೇರಿ ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳೂ ಮನೆಯಲ್ಲಿದ್ದಾರೆ. ಆದ್ರೆ ಸೆಕ್ಯೂರಿಟಿ ಗಾರ್ಡ್​ಗಳು ಮಾತ್ರ ಹಗಲಿರುಳು ಎನ್ನದೆ ಕೋವಿಡ್​​​ ಭೀತಿಯಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕುರಿತು ಅವರು ಈಟಿವಿ ಭಾರತ ಜೊತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಬರುವ ಸಂಬಳದಲ್ಲಿ ಮಾಸ್ಕ್​ ಮತ್ತು ಸ್ಯಾನಿಟೈಸರ್​ ಖರೀದಿಸೋಕೆ ಆಗಲ್ಲ. ಬಿಬಿಎಂ​ಪಿ ಬಳಿ ಹೋಗಿ ಕೇಳಿದ್ರೆ ನಾವು ನಿಮಗೆಲ್ಲ ಉಚಿತವಾಗಿ ನೀಡಲ್ಲ. ಕೇವಲ ನಮ್ಮ ಉದ್ಯೋಗಿಗಳಿಗೆ ಮಾತ್ರ ಅಂತಾರೆ ಎಂದು ಖಾಸಗಿ ಅಪಾರ್ಟ್​ಮೆಂಟ್​ವೊಂದರ ಸೆಕ್ಯೂರಿಟಿ ಗಾರ್ಡ್ ಮಂಜುನಾಥ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೊರೊನಾ ಭಯದಲ್ಲೇ ಕೆಲಸ ಮಾಡುವ ಖಾಸಗಿ ಸೆಕ್ಯೂರಿಟಿ ಗಾರ್ಡ್ಸ್

ಮಾರ್ಚ್ 20 ರವರೆಗೂ ನಮಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಈಗ ಕೊರೊನಾ ಬಂದ ಮೇಲೆ ಅನಾನುಕೂಲತೆಗಳು ಹೆಚ್ಚಾಗಿವೆ. ಖಾಸಗಿ ಕಂಪನಿಗಳಲ್ಲಿ, ಗಾರ್ಮೆಂಟ್ಸ್​​ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸದ್ಯ ಮನೆಯಲ್ಲಿದ್ದಾರೆ. ಅದ್ರೆ ಅಪಾರ್ಟ್​ಮೆಂಟ್​ಗಳಲ್ಲಿರುವ ನಮಗೆ ರಜೆ ಇಲ್ಲ. ಹಗಲು ರಾತ್ರಿ ಎನ್ನದೆ ಕೆಲಸ ಮಾಡ್ತಿದ್ದೇವೆ. ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರ ಸವಲತ್ತನ್ನು ಕಲ್ಪಿಸಿದೆ. ಅದ್ರೆ ನಮ್ಮ ಸಮಸ್ಯೆ ಕೇಳೋರು ಇಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಂಪನಿಗಳಲ್ಲಿ ಅಂತಹ ಸೌಲಭ್ಯಗಳಿಲ್ಲ. ಕೆಲಸಕ್ಕೆ ಬಂದ್ರೆ ಕೂಲಿ, ಇಲ್ಲದಿದ್ರೆ ಇಲ್ಲ. ಈ ಕಾಯಿಲೆ ಭಯದಲ್ಲೂ ನಾವು ಕೆಲಸಕ್ಕೆ ಬರ್ತೇವೆ ಅಂದ್ರೆ ಅದಕ್ಕೆ ನಮ್ಮ ಬಡತನ ಕಾರಣ. ಇದರ ನಡುವೆ ನಮಗೆ ಪೊಲೀಸರ ಭಯ. ನಾವು ಒಂದೊತ್ತಿನ ಊಟಕ್ಕಾಗಿ ಹೊರ ಬಂದಿದ್ದೇವೆ ಎನ್ನುವಷ್ಟರಲ್ಲೇ ಪೊಲೀಸರು ನಮ್ಮ ಮೇಲೆ ಲಾಠಿ ಬೀಸುತ್ತಾರೆ. ದಯವಿಟ್ಟು ಪೊಲೀಸರು ನಮಗೂ ಓಡಾಡುವುದಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಈ ಭದ್ರತಾ ಸಿಬ್ಬಂದಿ.

ನಾವು ಮಾಡುವ ಕೆಲಸಕ್ಕೆ ಸಂಬಳ ಕೊಡ್ತಾರೆ. ಅದ್ರೆ ಈ ಪರಿಸ್ಥಿತಿಯಲ್ಲಿ ಕೆಲಸ ಮಾಡೋಕು ನಮಗೆ ಭಯ. ನಮಗೂ ಮನೆ, ಮಕ್ಕಳು ಇದ್ದಾರೆ. ಏನಾದ್ರು ಹೆಚ್ಚು ಕಡಿಮೆ ಆದ್ರೆ ನಮ್ಮ ಜೀವನ ಬೀದಿಗೆ ಬರುತ್ತೆ ಎಂದು ಕೆಂಪರಾಜ್ ಎಂಬ ಸೆಕ್ಯೂರಿಟಿ ಈ ವಿಷಮ ಪರಿಸ್ಥಿತಿಯಲ್ಲಿ ನೋವನ್ನು ಈಟಿವಿ ಭಾರತದ ಮುಂದೆ ಬಿಚ್ಚಿದ್ದಾರೆ.

ABOUT THE AUTHOR

...view details