ಬೆಂಗಳೂರು: ಖಾಸಗಿ ಬಸ್‌ಗಳ ದರ ಸುಲಿಗೆ ಆರೋಪ ಹಿನ್ನೆಲೆ ಮೆಜೆಸ್ಟಿಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಮಫ್ತಿಯಲ್ಲಿ ಬಂದ ಅಪರ ಸಾರಿಗೆ ಆಯುಕ್ತ ನರೇಂದ್ರ ಹೊಳಲ್ಕರ ನೇತೃತ್ವದ ತಂಡ ತಪಾಸಣೆ ನಡೆಸಿತು.
ಪ್ರಯಾಣಿಕರಿಂದಲೂ ದರದ ಬಗ್ಗೆ ಮಾಹಿತಿ ಪಡೆದ ನರೇಂದ್ರ ಹೋಳ್ಕರ್, ದರ ಪಟ್ಟಿ ಹಿಡಿದು ಜನರ ಬಳಿ ದರದ ಬಗ್ಗೆ ವಿಚಾರಣೆ ನಡೆಸಿದರು. ಖಾಸಗಿ ಬಸ್‌ಗಳ ದುಪ್ಪಟ್ಟು ಸುಲಿಗೆ ಬಗ್ಗೆ ವಿಚಾರಣೆ ನೆಡೆಸಿ, ಹೆಚ್ಚು ದರ ಪಡೆಯದಂತೆ ಖಾಸಗಿ ಬಸ್ನವರಿಗೂ ತಾಕೀತು ಮಾಡಿದರು.
ಅಲ್ಲದೆ, ಜಂಟಿ ಸಾರಿಗೆ ಆಯುಕ್ತ ಹಾಲಸ್ವಾಮಿ ಕೂಡ ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಹಾಲಸ್ವಾಮಿ ಸಮ್ಮುಖದಲ್ಲೇ ಪ್ರಯಾಣಿಕರಿಂದ ಹೆಚ್ಚು ದರ ವಸೂಲು ಮಾಡಿದ್ದು ಕಂಡು ಬಂದಿತು. ಶಿವಮೊಗ್ಗಕ್ಕೆ ಹೋಗುತ್ತಿದ್ದ ಖಾಸಗಿ ಬಸ್ನವರಿಂದ ಹೆಚ್ಚುವರಿ ದರ ವಸೂಲು ಮಾಡಲಾಗಿದ್ದು, 370ರ ಬದಲು 400 ರೂ. ದರ ಕೇಳಿದ ಖಾಸಗಿ ಬಸ್ ಕಂಡಕ್ಟರ್ ವಿರುದ್ಧ ರೊಚ್ಚಿಗೆದ್ದ ಪ್ರಯಾಣಿಕರ ಗಲಾಟೆಯಲ್ಲಿ ಜಂಟಿ ಆಯುಕ್ತ ಹಾಲಸ್ವಾಮಿ ಮಧ್ಯಪ್ರವೇಶ ಮಾಡಿದರು. ಪ್ರಯಾಣಿಕರಿಂದ ಪಡೆದ ಹೆಚ್ಚುವರಿ ದರ ವಾಪಸ್ ಕೊಡಿಸಿದ ಹಾಲಸ್ವಾಮಿ ಎಲ್ಲಾ ಖಾಸಗಿ ಬಸ್ಗಳಲ್ಲೂ ಜಿಲ್ಲಾವಾರು ದರ ಪಟ್ಟಿ ಅಂಟಿಸಿದರು.